ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಯಾಮ್ ಕಾನ್ ಸ್ಟಾಸ್ ಗೆ ಬೇಕೆಂದೇ ಢಿಕ್ಕಿ ಹೊಡೆದ ವಿರಾಟ್ ಕೊಹ್ಲಿ ವಿಡಿಯೋ
ಇಂದು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಇತ್ತೀಚೆಗಿನ ವರದಿ ಬಂದಾಗ 2 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಕಣಕ್ಕಿಳಿದ ಯುವ ಬ್ಯಾಟಿಗ ಸ್ಯಾಮ್ ಕಾನ್ ಸ್ಟಾಸ್ 60 ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
ಔಟಾದ ಬಳಿಕ ಪೆವಿಲಿಯನ್ ಕಡೆಗೆ ಸಾಗುತ್ತಿದ್ದ ಕೊನ್ ಸ್ಟಾನ್ ಗೆ ಎದುರಿನಿಂದ ಬರುತ್ತಿದ್ದ ವಿರಾಟ್ ಕೊಹ್ಲಿ ಬೇಕೆಂದೇ ಢಿಕ್ಕಿ ಹೊಡೆದಿದ್ದಾರೆ. ಆಗ ಸ್ಯಾಮ್ ಸಿಟ್ಟಿಗೆದ್ದು ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. ಆಗ ಕೊಹ್ಲಿ ಕೂಡಾ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಅಂಪಾಯರ್ ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದ್ದಾರೆ.
ಕೊಹ್ಲಿಯ ವರ್ತನೆ ಬಗ್ಗೆ ಕೆಲವರು ಕಿಡಿ ಕಾರಿದ್ದಾರೆ. ಬೇಕೆಂದೇ ಕಿರಿಕ್ ಮಾಡುವ ಅಗತ್ಯವೇನಿತ್ತು ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಆಸ್ಟ್ರೇಲಿಯಾ ಜೊತೆ ಈ ರೀತಿಯ ಅಗ್ರೆಷನ್ ಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.