ಇಂಗ್ಲೆಂಡ್ ಸ್ಪಿನ್ ಗುರುವಾಗಿ ಸಕ್ಲೇನ್ ಮುಷ್ತಾಕ್

ಗುರುವಾರ, 28 ಜುಲೈ 2016 (09:55 IST)
ಪಾಕಿಸ್ತಾನ ಆಫ್ ಸ್ಪಿನ್ ಗ್ರೇಟ್ ಸಕ್ಲೇನ್ ಮುಷ್ತಾಕ್ ಇಂಗ್ಲೆಂಡ್ ಕೋಚಿಂಗ್ ಸಲಹೆಗಾರರಾಗಿ ಇನ್ನೊಂದು ಅವಧಿಗೆ ಆಯ್ಕೆಯಾಗಿದ್ದಾರೆ. ಇದರಿಂದ ಕ್ರಿಕೆಟರ್ ಒಬ್ಬರ ಆಟದ ದಿನಗಳು ಮುಗಿದ ಬಳಿಕ ರಾಷ್ಟ್ರೀಯ ನಿಷ್ಠೆ ಹೇಗೆ ಅಸ್ಥಿರಗೊಳ್ಳುತ್ತದೆನ್ನುವುದರ ಬಗ್ಗೆ ಗಮನಸೆಳೆದಿದೆ.

 ಓಲ್ಡ್ ಟ್ರಾಫರ್ಡ್‍‌ನಲ್ಲಿ ಇತ್ತೀಚಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಸಕ್ಲೇನ್ ಅವರನ್ನು ಇಂಗ್ಲೆಂಡ್ ಕರೆತಂದಿದೆ.  ಈ ಪ್ರಕ್ರಿಯೆಯಲ್ಲಿ ಅವರು ಆಫ್ ಸ್ಪಿನ್ನರ್ ಮೊಯಿನ್ ಅಲಿ ಮತ್ತು ಲೆಗ್ ಬ್ರೇಕ್ ಬೌಲರ್ ಅದಿಲ್ ರಷೀದ್ ಜತೆ ಸ್ಪಿನ್ ಬೌಲಿಂಗ್ ವಿಚಾರವಿನಿಮಯ ನಡೆಸಿದರು.
 
 ಸಕ್ಲೇನ್ ಅವರ ಪಾಕಿಸ್ತಾನದ ಮಾಜಿ ಸಹಆಟಗಾರ ಮುಷ್ತಾಕ್ ಅಹ್ಮದ್ ಅವರು ಪ್ರವಾಸಿ ತಂಡದ ಜತೆ ಕಾಯಂ ಆಧಾರದ ಮೇಲೆ ಇದೇ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾಕಿಸ್ತಾನದ ಪಾತ್ರವನ್ನು ವಹಿಸಿಕೊಳ್ಳುವ ಮುಂಚೆ ಮಾಜಿ ಲೆಗ್‌ಸ್ಪಿನ್ನರ್ ಮುಷ್ತಾಕ್ ಅವರು ಇಂಗ್ಲೆಂಡ್ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು.
 
 ಆಫ್ ಸ್ಪಿನ್ ಲೆಜೆಂಡ್ ಮುತ್ತಯ ಮುರಳೀಧರನ್ ಟೆಸ್ಟ್ ಕ್ರಿಕೆಟ್ ಸಾರ್ವಕಾಲಿಕ ಅತೀ ಹೆಚ್ಚು ವಿಕೆಟ್ ಪಡೆದವರಾಗಿದ್ದು, ಇತ್ತೀಚಿನ ಸರಣಿಯಲ್ಲಿ ಆಸ್ಟ್ರೇಲಿಯಾಗೆ ಬೌಲಿಂಗ್ ಸಲಹೆಗಾರರಾಗಿದ್ದಕ್ಕೆ ತೀವ್ರ ಟೀಕಾಪ್ರವಾಹಕ್ಕೆ ಗುರಿಯಾಗಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಲೀಷ್ ಮತ್ತು ಪಾಕಿಸ್ತಾನಿ ಅಧಿಕಾರಿಗಳ ನಡುವೆ ವಾತಾವರಣ ಸೌಹಾರ್ದವಾಗಿದೆ.
 
 ಪಾಕಿಸ್ತಾನವು 2010ರಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದ ಬಳಿಕ ಇಂಗ್ಲೆಂಡ್ ಪ್ರವಾಸವನ್ನು ಇದೇ ಮೊದಲ ಬಾರಿಗೆ ಪಾಕಿಸ್ತಾನ ಕೈಗೊಳ್ಳುತ್ತಿದ್ದು, ಕ್ರಿಕೆಟ್ ಮೂಲಕ  ತಮ್ಮ ಸಾಮರ್ಥ್ಯ ಸಾಬೀತಿಗೆ ಎರಡೂ ತಂಡಗಳು ಎದುರು ನೋಡುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ