ಗೌತಮ್ ಗಂಭೀರ್ ಗೆ ಎಷ್ಟು ಕೋಟಿ ಬೇಕಾದ್ರೂ ಬರ್ಕೊಳ್ಳಿ ಎಂದು ಬ್ಲಾಂಕ್ ಚೆಕ್ ಕೊಟ್ಟ ಶಾರುಖ್ ಖಾನ್

Krishnaveni K

ಸೋಮವಾರ, 27 ಮೇ 2024 (12:17 IST)
Photo Credit: Gautam Gambhir X
ಚೆನ್ನೈ: ಐಪಿಎಲ್ 2024 ರಲ್ಲಿ ಕೆಕೆಆರ್ ತಂಡವನ್ನು ಮತ್ತೆ ಫೈನಲ್ ಗೇರಿಸಿದ್ದು ಮಾತ್ರವಲ್ಲ, ಚಾಂಪಿಯನ್ ಪಟ್ಟಕ್ಕೇರಿಸುವುದರಲ್ಲಿ ಗೌತಮ್ ಗಂಭೀರ್ ಸಾಧನೆ ಮುಖ್ಯವಾಗಿದೆ.

ಇದೀಗ ತಂಡದ ಗೆಲುವಿನಿಂದ ಖುಷಿಯಾಗಿರುವ ಮಾಲಿಕ ಶಾರುಖ್ ಖಾನ್ ಮೆಂಟರ್ ಗೌತಮ್ ಗಂಭೀರ್ ಗೆ ಎಷ್ಟು ಕೋಟಿ ಬೇಕಾದರೂ ಬರ್ಕೊ ಎಂದು ಬ್ಲಾಂಕ್ ಚೆಕ್ ನೀಡಿದ್ದಾರೆಂದು ಸುದ್ದಿಯಾಗಿದೆ.

ಐಪಿಎಲ್ ನಲ್ಲಿ ಕೆಕೆಆರ್ ಗೆಲ್ಲುತ್ತಿದ್ದಂತೇ ಗೌತಮ್ ಗಂಭೀರ್ ಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಕರೆತರಲು ಬಿಸಿಸಿಐ ಪ್ರಯತ್ನಿಸುತ್ತಿದೆ. ಆದರೆ ಅವರು ಕೈ ತಪ್ಪಿ ಹೋಗದಂತೆ ಶಾರುಖ್ ಬ್ಲಾಂಕ್ ಚೆಕ್ ನೀಡಿದ್ದಾರೆ.

ಎಷ್ಟು ಕೋಟಿ ಬೇಕೋ ಅಷ್ಟು ತಗೋ, ಆದರೆ ಯಾವುದೇ ಕಾರಣಕ್ಕೂ ಕೆಕೆಆರ್ ತಂಡವನ್ನು ಬಿಟ್ಟು ಹೋಗಬೇಡ ಎಂದು ಗಂಭೀರ್ ಗೆ ಶಾರುಖ್ ಬಿಗ್ ಆಫರ್ ನೀಡಿದ್ದಾರಂತೆ. ಕೆಕೆಆರ್ ಈ ಮೊದಲು ಎರಡು ಬಾರಿ ಐಪಿಎಲ್ ಗೆದ್ದಿರುವುದೂ ಗಂಭೀರ್ ನಾಯಕತ್ವದಲ್ಲಿ. ಹೀಗಾಗಿ ಗಂಭೀರ್ ಮೇಲೆ ಶಾರುಖ್ ಗೆ ಭಾರೀ ಪ್ರೀತಿ. ಇದಕ್ಕಾಗಿಯೇ ಈ ಐಪಿಎಲ್ ಗೆ ಅವರನ್ನು ತಂಡಕ್ಕೆ ಮೆಂಟರ್ ಆಗಿ ಕರೆಸಿಕೊಂಡಿದ್ದರು. ಆಗಲೂ ಅವರಿಗೆ ಭಾರೀ ಮೊತ್ತವನ್ನೇ ಸಂಭಾವನೆಯಾಗಿ ನೀಡಿದ್ದರಂತೆ. ಇದೀಗ ಶಾರುಖ್ ನೀಡಿದ ಬ್ಲಾಂಕ್ ಚೆಕ್ ಎದುರು ಟೀಂ ಇಂಡಿಯಾ ಕೋಚ್ ಹುದ್ದೆಯನ್ನು ಗಂಭೀರ್ ಕೈ ಬಿಡುತ್ತಾರಾ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ