ದಾಂಪತ್ಯ ವಿರಸದ ಬಳಿಕ ಗಮನ ಸೆಳೆಯುತ್ತಿದೆ ಶಿಖರ್ ಧವನ್ ರ ಈ ಸಂದೇಶ

ಭಾನುವಾರ, 12 ಸೆಪ್ಟಂಬರ್ 2021 (09:20 IST)
ದುಬೈ: ಆಯೆಷಾ ಜೊತೆಗಿನ 9 ವರ್ಷಗಳ ದಾಂಪತ್ಯ ಜೀವನ ಮುರಿದುಬಿದ್ದ ಸುದ್ದಿ ಬಳಿಕ ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.


ಆಯೆಷಾ ಮೊನ್ನೆಯಷ್ಟೇ ಧವನ್ ರಿಂದ ಪ್ರತ್ಯೇಕವಾಗುತ್ತಿರುವುದರ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಆದರೆ ಧವನ್ ಎಲ್ಲಿಯೂ ಈ ಬಗ್ಗೆ ಬಾಯ್ಬಿಟ್ಟಿಲ್ಲ.

ಈ ನಡುವೆ ಐಪಿಎಲ್ ಆಡಲು ಯುಎಇಗೆ ತೆರಳಿರುವ ಧವನ್, ಇನ್ ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಬರೆದಿದ್ದು, ಅವರ ಪ್ರಸಕ್ತ ಪರಿಸ್ಥಿತಿಗೆ ತಕ್ಕ ಸಂದೇಶ ಎಂದೇ ವಿಶ್ಲೇಷಿಸಲಾಗಿದೆ. ಧವನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ‘ಏನೇ ಬಂದರೂ, ನಗು ನಗುತ್ತಾ ಇರುವುದೇ ಒಬ್ಬರ ಅತ್ಯಂತ ಪ್ರಬಲ ಶಕ್ತಿಯಾಗಿರುತ್ತದೆ’ ಎಂದು ನಗುತ್ತಿರುವ ಫೋಟೋ ಪ್ರಕಟಿಸಿದ್ದಾರೆ. ಈ ಮೂಲಕ ತಮ್ಮ ವೈಯಕ್ತಿಕ ಜೀವನದಲ್ಲಿ ಏನೇ ಬಂದರೂ ಅದನ್ನು ನಗುತ್ತಲೇ ಎದುರಿಸುವುದಾಗಿ ಸುಳಿವು ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ