ಶಿಮ್ರೋನ್ ಅಬ್ಬರಕ್ಕೆ ಬೆಚ್ಚಿಬಿದ್ದ ಟೀಂ ಇಂಡಿಯಾ
ಆರಂಭಿಕ ಕಿರನ್ ಪೊವೆಲ್ 51 ರನ್ ಗಳಿಸಿ ಔಟಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್ ಅಬ್ಬರ ಭಾರತೀಯ ಬೌಲರ್ ಗಳನ್ನು ಕಂಗೆಡಿಸಿತು. ಕೇವಲ 78 ಎಸೆತಗಳಿಂದ 6 ಸಿಕ್ಸರ್, 6 ಬೌಂಡರಿ ಸಹಿತ 106 ರನ್ ಗಳಿಸಿದ ಅವರು ತಂಡದ ರನ್ ಗತಿ ಹೆಚ್ಚಿಸಿದರು.
ಭಾರತದ ಪರ ಯಜುವೇಂದ್ರ ಚಾಹಲ್ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿತ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಮತ್ತು ಖಲೀಲ್ ಮೊಹಮ್ಮದ್ 1 ವಿಕೆಟ್ ಕಬಳಿಸಿದರು. ಇದೀಗ ಭಾರತ ಗೆಲುವಿಗೆ 323 ರನ್ ಗಳ ಗುರಿ ಬೆನ್ನತ್ತಬೇಕಿದೆ.