ಅಪ್ಪನಿಗೇ ಟಾಂಗ್ ಕೊಟ್ಟ ಸೌರವ್ ಗಂಗೂಲಿ ಪುತ್ರಿ ಸನಾ!

ಮಂಗಳವಾರ, 26 ನವೆಂಬರ್ 2019 (09:31 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಯಶಸ್ವಿಯಾಗಿ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಿದ ಖುಷಿಯಲ್ಲಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಶಸ್ತಿ ಸಮಾರಂಭದಲ್ಲಿ ತೆಗೆಸಿಕೊಂಡಿದ್ದ ಫೋಟೋ ಒಂದನ್ನು ಪ್ರಕಟಿಸಿದ್ದರು.


ಗಂಗೂಲಿ ಈ ಚಿತ್ರದಲ್ಲಿ ತಮ್ಮ ಎಂದಿನ ಶೈಲಿಯಲ್ಲಿ ಕೈ ಕಟ್ಟಿ, ಏನನ್ನೋ ನೋಡುತ್ತಿರುವಂತೆ ಪೋಸ್ ಕೊಟ್ಟಿದ್ದರು. ಆದರೆ ಗಂಗೂಲಿಯ ಪೋಸ್ ನೋಡಿ ಯಾಕೋ ಅವರ ಪುತ್ರಿ ಸನಾಗೆ ಸ್ವಲ್ಪ ಅಪ್ಪನ ಕಾಲೆಳೆಯುವ ಎನಿಸಿರಬೇಕು. ಅದಕ್ಕೇ ಕಾಮೆಂಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

‘ಏನೋ ನಿಮಗೆ ಇಷ್ಟವಾಗದೇ ಇರುವ ಹಾಗೆ ಕಾಣ್ತಿದೆಯಲ್ಲಾ?’ ಎಂದು ಸನಾ ಅಪ್ಪನ ಕಾಲೆಳೆದಿದ್ದಾರೆ. ಇದಕ್ಕೆ ಗಂಗೂಲಿ ‘ಹೌದು. ನನ್ನ ಮಗಳು ಯಾಕೋ ದಿನ ಕಳೆದ ಹಾಗೆ ಹೇಳಿದ ಮಾತು ಕೇಳ್ತಿಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ. ಇದಕ್ಕೆ ತಮಾಷೆಯಾಗಿ ಉತ್ತರಿಸಿರುವ ಸನಾ ‘ಎಲ್ಲಾ ತಮ್ಮಿಂದಲೇ ಕಲಿತಿದ್ದು’ ಎಂದು ಗಂಗೂಲಿಯ ಹಠವಾದಿ ಸ್ವಭಾವವನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ. ಅಪ್ಪ-ಮಗಳ ಈ ಕಾಮೆಂಟ್, ಪ್ರತಿ ಕಾಮೆಂಟ್ ಗೆ ಸಾವಿರಾರು ಲೈಕ್ಸ್ ಬಂದಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ