ಜಿಂಬಾಬ್ವೆ ಟೀಂ ಇಂಡಿಯಾ ಸೋಲಿಸಲಿ..! ಪಾಕಿಸ್ತಾನ ಮಾಡ್ತಿರೋದು ಈಗ ಇದೊಂದೇ ಪ್ರಾರ್ಥನೆ!
ಪಾಕಿಸ್ತಾನ ಕಳೆದ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಗೆದ್ದು ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ಆದರೆ ಅದು ಸುಲಭವಲ್ಲ. ಒಂದು ವೇಳೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಗೇರಬೇಕಾದರೆ ಗುಂಪಿನಲ್ಲಿ ಉಳಿದ ತಂಡಗಳ ಸೋಲು-ಗೆಲುವು ಮುಖ್ಯವಾಗಲಿದೆ.
ಭಾನುವಾರ ನಡೆಯಲಿರುವ ಭಾರತ-ಜಿಂಬಾಬ್ವೆ ಪಂದ್ಯದಲ್ಲಿ ಜಿಂಬಾಬ್ವೆ ಗೆಲ್ಲುವುದು ಪಾಕಿಸ್ತಾನದ ಹಾದಿ ಸುಗಮವಾಗಿಸಲಿದೆ. ಹೀಗಾಗಿ ಭಾರತ ತಂಡ ಸೋಲಲಿ ಎಂದು ಪ್ರಾರ್ಥಿಸುವಂತಾಗಿದೆ.