ಮುಂಬೈ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಟೀಂ ಇಂಡಿಯಾದ ಮೊದಲ ಬ್ಯಾಚ್ ಇಂದು ಅಮೆರಿಕಾದತ್ತ ಪ್ರಯಾಣ ಬೆಳೆಸಲಿದೆ.
ಜೂನ್ 2 ರಿಂದ ಟೂರ್ನಮೆಂಟ್ ಶುರುವಾಗಲಿದೆ. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಟೂರ್ನಮೆಂಟ್ ನಡೆಯಲಿದೆ. ಭಾರತಕ್ಕೆ ಮೊದಲ ಪಂದ್ಯ ಜೂನ್ 5 ರಂದು ಐರ್ಲೆಂಡ್ ವಿರುದ್ಧವಿದೆ. ಇದಕ್ಕೆ ಮೊದಲು ಈಗಷ್ಟೇ ಐಪಿಎಲ್ ಮುಗಿಸಿರುವ ಆಟಗಾರರು ಇದೀಗ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಮೊದಲ ಬ್ಯಾಚ್ ನಲ್ಲಿ ಕೆಲವು ಆಟಗಾರರು ಮಾತ್ರ ಈಗ ಅಮೆರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಇದೀಗ ಐಪಿಎಲ್ ನ ಭಾಗವಾಗಿರುವ ಆಟಗಾರರು ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲವು ಆಟಗಾರರು ಅನಿವಾರ್ಯ ಕಾರಣದಿಂದ ಎರಡನೇ ಹಂತದಲ್ಲಿ ಪ್ರಯಾಣ ಮಾಡಲಿದ್ದಾರೆ.
ಇಂದು ರಾತ್ರಿ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಶಿವಂ ದುಬೆ, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ರಿಷಬ್ ಪಂತ್, ಕುಲದೀಪ್ ಯಾದವ್, ಅರ್ಷ್ ದೀಪ್ ಸಿಂಗ್ ಪ್ರಯಾಣ ಮಾಡುತ್ತಿದ್ದಾರೆ.