T20 WC 2024: ಸೆಮಿಫೈನಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿರುವ ತಂಡಗಳು ಮತ್ತು ಸಮಯದ ಮಾಹಿತಿ ಇಲ್ಲಿದೆ

Krishnaveni K

ಬುಧವಾರ, 26 ಜೂನ್ 2024 (09:15 IST)
ಗಯಾನ: ಟಿ20 ವಿಶ್ವಕಪ್ 2024 ಈಗ ನಿರ್ಣಾಯಕ ಘಟ್ಟಕ್ಕೆ ಬಂದಿದ್ದು, ಸೆಮಿಫೈನಲ್ ಹಂತದ ಪಂದ್ಯಗಳು ಆರಂಭವಾಗಲಿದೆ. ಸೆಮಿಫೈನಲ್ ಗೇರಿದ ನಾಲ್ಕು ತಂಡಗಳು ಯಾವುವು ಎಂದು ಈಗಾಗಲೇ ನಿರ್ಧಾರವಾಗಿದೆ.

ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಭಾರತ, ದ.ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಗೇರಿವೆ. ಸೆಮಿಫೈನಲ್ ಹಂತದ ಪಂದ್ಯಗಳು ನಾಳೆ ಅಂದರೆ ಜೂನ್ 27 ರಂದು ನಡೆಯಲಿದೆ. ಮೊದಲ ಪಂದ್ಯ ಬೆಳಿಗ್ಗೆ 6 ಗಂಟೆಗೆ ಮತ್ತು ಎರಡನೇ ಪಂದ್ಯ ರಾತ್ರಿ 8 ಗಂಟೆಗೆ ನಡೆಯಲಿದೆ.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗುಂಪು 2 ರ ಅಗ್ರಸ್ಥಾನಿ ದ. ಆಫ್ರಿಕಾ ಮತ್ತು ಗುಂಪು 1 ರ ದ್ವಿತೀಯ ಸ್ಥಾನಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿದೆ. ಈ ಪಂದ್ಯ ಟ್ರಿನಿಡಾಡ್ ನಲ್ಲಿ ನಡೆಯಲಿದೆ. ಈ ಪಂದ್ಯ ಬೆಳಿಗ್ಗೆ 6 ಗಂಟೆಗೆ ಆರಂಭವಾಗುತ್ತಿದೆ. ಸೂಪರ್ 8 ಹಂತದಲ್ಲಿ ಆಫ್ರಿಕಾ ಮೂರೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಗೇರಿತ್ತು. ಇತ್ತ ಅಫ್ಘಾನಿಸ್ತಾನ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಗೇರಿತ್ತು.

ಇನ್ನೊಂದು ಪಂದ್ಯ ಗುಂಪು 1 ರ ಅಗ್ರಸ್ಥಾನಿ ಭಾರತ ಮತ್ತು ಗುಂಪು 2 ರ ದ್ವಿತೀಯ ಸ್ಥಾನಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯ ಗಯಾನದಲ್ಲಿ ನಡೆಯುತ್ತಿದೆ. ಭಾರತ ಈ ಟಿ20 ವಿಶ್ವಕಪ್ ನಲ್ಲಿ ಇದುವರೆಗೆ ಅಜೇಯವಾಗಿದ್ದು ಸೆಮಿಫೈನಲ್ ಗೇರಿದೆ. ಇತ್ತ ಇಂಗ್ಲೆಂಡ್ ಸೂಪರ್ 8 ಹಂತದಲ್ಲಿ 3 ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಸೆಮಿಫೈನಲ್ ಗೇರಿತ್ತು. ಈ ಎಲ್ಲಾ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಅಥವಾ ಹಾಟ್ ಸ್ಟಾರ್ ಆಪ್ ನಲ್ಲಿ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ