T20 World Cup 2024: ವ್ಯಂಗ್ಯದ ಪೋಸ್ಟ್ ಮಾಡಿ ಕೊಹ್ಲಿ ಭಯಕ್ಕೆ ಡಿಲೀಟ್ ಮಾಡಿಬಿಟ್ಟರಾ ಸ್ಟುವರ್ಟ್ ಬ್ರಾಡ್

Krishnaveni K

ಶನಿವಾರ, 29 ಜೂನ್ 2024 (11:35 IST)
ಬಾರ್ಬಡೋಸ್: ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಪಂದ್ಯವಾಡುತ್ತಿರುವ ಹಿನ್ನಲೆಯಲ್ಲಿ ಐಸಿಸಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ನೀಡಿದೆ.

ಕೊಹ್ಲಿಯ 17  ವರ್ಷಗಳ ವೃತ್ತಿ ಜೀವನದ ಪಯಣದ ಕುರಿತಾದ ವಿಶೇಷ ಫೋಟೋವೊಂದನ್ನು ಬಿಡುಗಡೆಗೊಳಿಸಿದ ಐಸಿಸಿ ಕಿಂಗ್ ಕಿರೀಟಕ್ಕೆ ಕೊನೆಯ ಮುತ್ತೊಂದು ಸೇರ್ಪಡೆಯಾಗಲು ಕಾಯುತ್ತಿದೆ. ಟಿ20 ವಿಶ್ವಕಪ್ ವೈಭವದ ಕ್ಷಣದಿಂದ ವಿರಾಟ್ ಕೊಹ್ಲಿ ಒಂದೇ ಹೆಜ್ಜೆ ಹಿಂದಿದ್ದಾರೆ’ ಎಂದು ಐಸಿಸಿ ಬರೆದುಕೊಂಡಿತ್ತು.

ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್, ‘ಐಪಿಎಲ್?’ ಎಂದು ಕಾಲೆಳೆದಿದ್ದರು. ಐಪಿಎಲ್ ನಲ್ಲಿ ಇದುವರೆಗೆ ಕೊಹ್ಲಿ ಟ್ರೋಫಿ ಗೆದ್ದಿಲ್ಲ ಎನ್ನುವುದನ್ನು ತಮಾಷೆ ಮಾಡಿದ್ದರು. ಆದರೆ ಕೊಹ್ಲಿಗೆ ಈ ರೀತಿ ವ್ಯಂಗ್ಯ ಮಾಡಿದರೆ ಯಾವ ರೀತಿಯ ಉತ್ತರ ಸಿಗುತ್ತದೆ ಎಂದು ಬ್ರಾಡ್ ಗೆ ಚೆನ್ನಾಗಿ ನೆನಪಾಗಿರಬೇಕು.

ಇದಕ್ಕೆ ತಕ್ಷಣವೇ ಅವರನ್ನು ಆ ಪ್ರತಿಕ್ರಿಯೆಯನ್ನು ಡಿಲೀಟ್ ಮಾಡಿದ್ದರು. ಈ ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಬ್ಯಾಟ್ ನಿಂದ ಇದುವರೆಗೆ ಹೇಳಿಕೊಳ್ಳುವಂತಹ ಇನಿಂಗ್ಸ್ ಬಂದಿಲ್ಲ. ಆದರೆ ಫೈನಲ್ ನಲ್ಲಿ ಅವರು ಆಡಬಹುದು ಎಂದು ಎಲ್ಲರ ನಿರೀಕ್ಷೆಯಾಗಿದೆ. ತಮ್ಮನ್ನು ಕೆಣಕಿದವರಿಗೆ ಬ್ಯಾಟ್ ಜೊತೆಗೆ ಆಕ್ಷನ್ ಮೂಲಕವೂ ಕೊಹ್ಲಿ ಪ್ರತ್ಯುತ್ತರ ನೀಡುವುದರಲ್ಲಿ ಫೇಮಸ್. ಕೊಹ್ಲಿ ಅಭಿಮಾನಿಗಳೂ ಅಂತಹ ವ್ಯಕ್ತಿಗಳನ್ನು ಅಟ್ಟಾಡಿಸಿಕೊಂಡು ಟ್ರೋಲ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಕೊಹ್ಲಿಯನ್ನು ಕೆಣಕುವ ಸಾಹಸವನ್ನು ಯಾರೂ ಮಾಡುವುದಿಲ್ಲ. ಈಗ ಬ್ರಾಡ್ ಕೂಡಾ ಕೊಹ್ಲಿ ಭಯಕ್ಕೇ ಪೋಸ್ಟ್ ಡಿಲೀಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ