RCB vs MI: ತವರಿನಲ್ಲಿ ಮುಂಬೈಗೆ ಬಿಗ್ ಟಾರ್ಗೆಟ್ ನೀಡಿದ ಆರ್‌ಸಿಬಿ, ನಡೆಯದ ಬೂಮ್ರಾ ಪ್ಲ್ಯಾನ್‌

Sampriya

ಸೋಮವಾರ, 7 ಏಪ್ರಿಲ್ 2025 (22:00 IST)
Photo Courtesy X
ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಇಂದಿನ ಪಂದ್ಯಾಟದಲ್ಲಿ ಆರ್‌ಸಿಬಿ ತನ್ನ ಅದ್ಭುತ ಬ್ಯಾಟಿಂಗ್‌ನಿಂದ ಮುಂಬೈಗೆ ಬಿಗ್‌ ಟಾರ್ಗೆಟ್‌ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 221ರನ್ ಗಳಿಸಿತು. ಈ ಮೂಲಕ ಮುಂಬೈಗೆ ಬಿಗ್ ಟಾರ್ಗೆಟ್ ನೀಡಿದೆ.

ಆರಂಭದಲ್ಲೇ ಸಾಲ್ಟ್ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿತು. ಆದರೆ ವಿರಾಟ್‌ ಕೊಹ್ಲಿ ಹಾಗೂ ದೇವದತ್ ಪಾಡಿಕ್ಕಲ್ ಅವರು ಮತ್ತೇ ಉತ್ತಮ ಆರಂಭವನ್ನು ಕಂಡುಕೊಂಡರು.

ವಿರಾಟ್ ಕೊಹ್ಲಿ(76), ದೇವದತ್ತ್ ಪಡಿಕ್ಕಲ್(37), ರಜತ್ ಪಾಟಿದಾರ್(64), ಜಿತೇಶ್ ಶರ್ಮಾ(40) ಡೇವಿಡ್‌(1) ರನ್‌ನೊಂದಿದೆ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 221ರನ್ ಗಳಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ