ಟೀಂ ಇಂಡಿಯಾ ಕರ್ತವ್ಯಕ್ಕೆ ಬ್ರೇಕ್ ಹಾಕಿ ಮದುವೆಯಾದ ಕ್ರಿಕೆಟಿಗ ಮುಕೇಶ್ ಕುಮಾರ್
ಉತ್ತರ ಪ್ರದೇಶ ಮೂಲದ ವೇಗಿ ಮುಕೇಶ್ ಕುಮಾರ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಆಡಿದ್ದರು. ಮೂರನೇ ಟಿ20 ಪಂದ್ಯದ ವೇಳೆಗೆ ಮದುವೆ ನಿಮಿತ್ತ ಬ್ರೇಕ್ ಪಡೆದಿದ್ದರು.
ಇಂದು ತಮ್ಮ ಬಾಲ್ಯದ ಗೆಳತಿ ದಿವ್ಯಾ ಸಿಂಗ್ ಜೊತೆ ಮುಕೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಿನ್ನೆ ರಾತ್ರಿ ಗೋರಖ್ ಪುರದಲ್ಲಿ ಇಬ್ಬರ ವಿವಾಹ ಆರತಕ್ಷತೆ ನೆರವೇರಿತ್ತು. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಿಸೆಂಬರ್ 1 ರಂದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟಿ20 ವೇಳೆ ಅವರು ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಈ ಸರಣಿ ಮುಕ್ತಾಯವಾದದ ಮೇಲೆ ಅಂದರೆ ಡಿಸೆಂಬರ್ 4 ರಂದು ಮತ್ತೊಂದು ವಿವಾಹ ಆರತಕ್ಷತೆ ನಡೆಯಲಿದೆ.