ಸಚಿನ್ ಏಷ್ಯಾ ಕಪ್ ದಾಖಲೆ ಮೇಲೆ ಕಣ್ಣಿಟ್ಟಿರುವ ರೋಹಿತ್, ಕೊಹ್ಲಿ

ಶುಕ್ರವಾರ, 1 ಸೆಪ್ಟಂಬರ್ 2023 (09:00 IST)
ಕೊಲೊಂಬೊ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಇದೀಗ ಏಷ್ಯಾ ಕಪ್ ನಲ್ಲಿ ಆಡಲಿರುವ ಕಿಂಗ್ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ರೆಡಿಯಾಗಿದ್ದಾರೆ. ಕೇವಲ ಕೊಹ್ಲಿ ಮಾತ್ರವಲ್ಲ ನಾಯಕ ರೋಹಿತ್ ಶರ್ಮಾ ಕೂಡಾ ಸಚಿನ್ ದಾಖಲೆಯನ್ನು ಉಡೀಸ್ ಮಾಡುವ ಸಾಧ್ಯತೆಯಿದೆ.

ಏಕದಿನ ಕ್ರಿಕೆಟ್ ನಲ್ಲಿ 13 ಸಾವಿರ ರನ್ ಗಳಿಸಿದ ಆಟಗಾರ ಎನಿಸಿಕೊಂಡು ಸಚಿನ್ ಸಾಲಿಗೆ ಸೇರಲಿದ್ದಾರೆ ಕೊಹ್ಲಿ. ಅಲ್ಲದೆ, ಅಲ್ಲದೆ ಸದ್ಯಕ್ಕೆ ಏಷ್ಯಾ ಕಪ್ ನಲ್ಲಿ 613 ರನ್ ಗಳಿಸಿರುವ ಕೊಹ್ಲಿ 971 ರನ್ ಗಳಿಸಿರುವ ಸಚಿನ್ ರನ್ನು ಹಿಂದಿಕ್ಕಬಹುದಾಗಿದೆ.

ಇನ್ನು, ನಾಯಕ ರೋಹಿತ್ ಶರ್ಮಾ ಕೂಡಾ ಸಚಿನ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ರೋಹಿತ್ ಕೂಡಾ ಏಷ್ಯಾ ಕಪ್ ನಲ್ಲಿ ಗರಿಷ್ಠ ರನ್ ಸಿಡಿಸಿರುವ ಸಚಿನ್ ದಾಖಲೆ ಮುರಿಯಲು ಇನ್ನು 226 ರನ್ ಗಳಿಸಿದರೆ ಸಾಕು. ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ದಾಖಲೆ ಮಾಡಲಿದ್ದಾರೆ.ಅಲ್ಲದೆ ಏಷ್ಯಾ ಕಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಸುರೇಶ್ ರೈನಾ (18) ದಾಖಲೆ ಮುರಿಯಲು ರೋಹಿತ್ ಗೆ ಇನ್ನು ಒಂದು ಸಿಕ್ಸರ್ ಸಾಕು. ಅಲ್ಲದೆ, ಏಷ್ಯಾ ಕಪ್ ನಲ್ಲಿ 7 ಅರ್ಧಶತಕ ಸಿಡಿಸಿರುವ ರೋಹಿತ್ 8 ಅರ್ಧಶತಕ ಸಿಡಿಸಿರುವ ಸಚಿನ್ ದಾಖಲೆ ಮುರಿಯಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ