20 ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾಕ್ಕೆ ಬೆಂಗಳೂರಿನಲ್ಲೇ ಹೀಗಾಗಬೇಕೇ?!

ಗುರುವಾರ, 28 ಫೆಬ್ರವರಿ 2019 (09:09 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಿನ್ನೆ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಗಳ ಹೀನಾಯ ಸೋಲಾಗಿದೆ. ಜತೆಗೆ ಸರಣಿಯನ್ನೂ ಕಳೆದುಕೊಂಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 190 ರನ್ ಗಳ ಬೃಹತ್ ಮೊತ್ತವನ್ನೇ ಪೇರಿಸಿತ್ತು. ಭಾರತವೂ ಆಸ್ಟ್ರೇಲಿಯಾವನ್ನು ಆರಂಭದಲ್ಲಿ ನಿಯಂತ್ರಿಸಿ ಗೆಲುವಿನ ಭರವಸೆ ಮೂಡಿಸಿತ್ತು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಸಿಡಿದ ಪರಿಣಾಮ ಆಸ್ಟ್ರೇಲಿಯಾಕ್ಕೆ ರೋಚಕ ಜಯ ಒಲಿಯಿತು. ಮ್ಯಾಕ್ಸ್ ವೆಲ್ ಕೇವಲ 55 ಎಸೆತಗಳಲ್ಲಿ 9 ಸಿಕ್ಸರ್ ಸಹಿತ 113 ರನ್ ಗಳಿಸಿದರು. ಜತೆಗೆ ಭಾರತದ ಪ್ರಮುಖ ಬೌಲರ್ಸ್ ಗಳಾದ ಜಸ್ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್ ವಿಕೆಟ್ ಕೀಳಲು ವಿಫಲರಾಗಿದ್ದು, ಟೀಂ ಇಂಡಿಯಾ ಸೋಲಿಗೆ ಕಾರಣವಾಯಿತು. ಆಸ್ಟ್ರೇಲಿಯಾ ಅಂತಿಮವಾಗಿ 19.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಭಾರತದ ಪರ ಬ್ಯಾಟಿಂಗ್ ನಲ್ಲಿ ನಾಯಕ ಕೊಹ್ಲಿ 38 ಎಸೆತಗಳಲ್ಲಿ 72 ರನ್ ಗಳಿಸಿದರೆ, ಧೋನಿ 23 ಎಸೆತಗಳಲ್ಲಿ 40 ರನ್ ಗಳಿಸಿದರು.

ಇದರೊಂದಿಗೆ ಭಾರತ ಕಳೆದ 40 ತಿಂಗಳ ಅವಧಿಯಲ್ಲಿ ಅಂದರೆ 20 ಸರಣಿ ಗೆಲುವಿನ ಬಳಿಕ ಭಾರತದಲ್ಲೇ ಎದುರಾಳಿ ವಿರುದ್ಧ ಸರಣಿ ಸೋಲನುಭಿಸಿದ ಕುಖ್ಯಾತಿಗೆ ಒಳಗಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ