ವಿಶ್ವಕಪ್ ಆಡಲು ತೆರಳಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟೂರ್
ಒಂದು ದಿನದ ಮಟ್ಟಿಗೆ ಅಭ್ಯಾಸದಿಂದ ಬ್ರೇಕ್ ಪಡೆದಿರುವ ಟೀಂ ಇಂಡಿಯಾ ಕ್ರಿಕೆಟಿಗರು, ಸಹಾಯಕ ಸಿಬ್ಬಂದಿಗಳು ಜೊತೆಯಾಗಿ ರೋಟ್ ನೆಸ್ಟ್ ದ್ವೀಪಕ್ಕೆ ಪ್ರವಾಸ ತೆರಳಿದ್ದಾರೆ.
ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬದ ನೆಪದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬ್ರೇಕ್ ಪಡೆದು ಮೋಜು ಮಾಡಿದ್ದಾರೆ. ರೋಟ್ ನೆಸ್ಟ್ ದ್ವೀಪ ಆಸ್ಟ್ರೇಲಿಯಾದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದ್ದು, ಇದು ಡೈವಿಂಗ್, ಬೋಟಿಂಗ್ ಇತ್ಯಾದಿಗಳಿಗೆ ಹೆಸರುವಾಸಿಯಾಗಿದೆ.