ಟೀಂ ಇಂಡಿಯಾ ಗೆಳೆಯರ ಜೊತೆ ಹಾರ್ದಿಕ್ ಪಾಂಡ್ಯ ಬರ್ತ್ ಡೇ ಪಾರ್ಟಿ

ಮಂಗಳವಾರ, 11 ಅಕ್ಟೋಬರ್ 2022 (16:42 IST)
Photo Courtesy: Twitter
ಪರ್ತ್: ಟೀಂ ಇಂಡಿಯಾ ಆಲ್ ರೌಂಡರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬದ ಸಂಭ‍್ರಮದಲ್ಲಿದ್ದಾರೆ.

ಸದ್ಯಕ್ಕೆ ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ತೆರಳಿರುವ ಹಾರ್ದಿಕ್ ತಮ್ಮ ಹುಟ್ಟುಹಬ್ಬವನ್ನು ಟೀಂ ಇಂಡಿಯಾ ಗೆಳೆಯರ ಜೊತೆ ಕೇಕ್ ಕತ್ತರಿಸಿ ಆಚರಿಸಿಕೊಂಡಿದ್ದಾರೆ. ಈ ಕ್ಷಣಗಳನ್ನು ಬಿಸಿಸಿಐ ಹಂಚಿಕೊಂಡಿದೆ.

ಇದಕ್ಕೂ ಮೊದಲು ಅವರು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ತಮ್ಮ ಪುತ್ರನ ಜೊತೆ ಈ ಹಿಂದೆ ಆಚರಿಸಿದ್ದ ಹುಟ್ಟುಹಬ್ಬದ ಕ್ಷಣವೊಂದರ ವಿಡಿಯೋವನ್ನು ಪ್ರಕಟಿಸಿ ಈ ಹುಟ್ಟುಹಬ್ಬಕ್ಕೆ ಮಗನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ