ಕೆಎಲ್ ರಾಹುಲ್ ಗೆ ಕಾಡುತ್ತಿದೆ ಇದೊಂದೇ ಬೇಸರ!

ಸೋಮವಾರ, 12 ಫೆಬ್ರವರಿ 2018 (08:31 IST)
ಬೆಂಗಳೂರು: ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿಯಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾದ ಕೆಎಲ್ ರಾಹುಲ್ ಇದೀಗ ಟಿ20 ಸರಣಿಯಲ್ಲಿ ಕಳೆದುಕೊಂಡ ಫಾರ್ಮ್ ಮರಳಿ ಗಳಿಸುವ ವಿಶ್ವಾಸದಲ್ಲಿದ್ದಾರೆ.
 

ಇದೀಗ ತವರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನೇ ತಮ್ಮ ವಾಪಸಾತಿಗೆ ವೇದಿಕೆ ಮಾಡಿಕೊಂಡಿರುವ ರಾಹುಲ್ ಫಾರ್ಮ್ ಗೆ ಮರಳು ಬೆವರು ಸುರಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಅಲ್ಲೂ ರಾಹುಲ್ ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ.

ಈ ಬಗ್ಗೆ ಮಾತನಾಡಿರುವ ರಾಹುಲ್ ‘ನನಗೆ ಮತ್ತೆ ಆತ್ಮವಿಶ್ವಾಸ ಮರಳಿ ಪಡೆಯಲು 150 ಪ್ಲಸ್ ರನ್ ಹೊಡೆಯಲೇಬೇಕೆಂದಿಲ್ಲ. 50 ರನ್ ಗಳಿಸಲು ಸಾಧ್ಯವಾದರೂ ಸಾಕು. ಸ್ವಲ್ಪ ಹೊತ್ತು ಕ್ರೀಸ್ ನಲ್ಲಿರಬೇಕು ಮತ್ತು ಬಾಲ್ ಸರಿಯಾಗಿ ಹಿಟ್ ಮಾಡಬೇಕು’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ವಿಫಲವಾದ ಬೇಸರ ಅವರಲ್ಲಿದೆ. ಇದೀಗ ಟಿ20 ಗೆ  ಮತ್ತೆ ಆಫ್ರಿಕಾ ವಿಮಾನವೇರಲಿದ್ದು, ಅಲ್ಲಿನ ವೇಗದ, ಬೌನ್ಸಿ ಪಿಚ್ ಗೆ ತಕ್ಕಂತೆ ಆಡಲು ಬೆವರು ಸುರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ