ಡಬ್ಲ್ಯುಟಿಸಿ ಫೈನಲ್ ಆಡಲು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ
ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಏಳು ಆಟಗಾರರ ಗುಂಪು ಇಂದು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಿದೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಉಳಿದ ಆಟಗಾರರು ಐಪಿಎಲ್ ಮುಗಿದ ಬಳಿಕ ತಂಡ ಕೂಡಿಕೊಳ್ಳಲಿದ್ದಾರೆ.
ಈ ಬಾರಿ ಟೀಂ ಇಂಡಿಯಾ ಆಡಿಡಾಸ್ ಪ್ರಾಯೋಜಕತ್ವದ ಹೊಸ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಎದುರಾಳಿ ಆಸ್ಟ್ರೇಲಿಯಾ ತಂಡವೂ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಜೂನ್ 7 ರಂದು ದಿ ಓವಲ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.