ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಂ ಇಂಡಿಯಾ ಕಿರಿಯರಿಗೆ ಜಿಂಬಾಬ್ವೆ ಪರೀಕ್ಷೆ ಇಂದಿನಿಂದ ಶುರು

Krishnaveni K

ಶನಿವಾರ, 6 ಜುಲೈ 2024 (10:01 IST)
ಹರಾರೆ: ಟಿ20 ವಿಶ್ವಕಪ್ ಮುಗಿದು ಭಾರತ ವಿಶ್ವಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವಾಗಲೇ ಇದೀಗ ಕಿರಿಯರ ತಂಡ ಮತ್ತೊಂದು ಟಿ20 ಸರಣಿಗೆ ಸಜ್ಜಾಗಿದೆ.

ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗುತ್ತಿದೆ. ಈ ಪಂದ್ಯಕ್ಕೆ ಟೀಂ ಇಂಡಿಯಾಗೆ ಶುಬ್ಮನ್ ಗಿಲ್ ನಾಯಕತ್ವ ವಹಿಸಿಕೊಂಡಿದ್ದಾರೆ. ಹಿರಿಯರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಐಪಿಎಲ್ ನಲ್ಲಿ ಮಿಂಚಿದ ಕಿರಿಯರಿಗೆ ಅವಕಾಶ ನೀಡಲಾಗಿದೆ.

ಋತುರಾಜ್ ಗಾಯಕ್ ವಾಡ್, ರಿಂಕು ಸಿಂಗ್, ರಿಯಾನ್ ಪರಾಗ್, ಶುಬ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಮುಂತಾದ ಪ್ರತಿಭೆಗಳಿಗೆ ಟಿ20 ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಟೀಂ ಇಂಡಿಯಾದ ಭವಿಷ್ಯದ ತಾರೆಗಳಿಗೆ ಈಗ ಜಿಂಬಾಬ್ವೆ ಸರಣಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಕ್ಕಿದೆ.

ಭಾರತ ತಂಡಕ್ಕೆ ಈ ಸರಣಿಯಲ್ಲಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸುತ್ತಿದ್ದಾರೆ. ಶುಬ್ಮನ್ ಗಿಲ್ ಐಪಿಎಲ್ ನಲ್ಲಿ ನಾಯಕನಾಗಿ ಅಷ್ಟೊಂದು ಯಶಸ್ಸು ಪಡೆದಿರಲಿಲ್ಲ. ಈಗ ಭಾರತ ತಂಡದ ನಾಯಕರಾಗಿ ಕ್ಲಿಕ್ ಆಗುತ್ತಾರಾ ನೋಡಬೇಕಿದೆ. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಸಂಜೆ 4.30  ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ