ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದನ್ನೇ ಕಾಯುತ್ತಿದೆ ಈ ಟೀಂ

Krishnaveni K

ಶುಕ್ರವಾರ, 12 ಜುಲೈ 2024 (11:33 IST)
ಮುಂಬೈ: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ 2025 ರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಹಿಂದೆ ಸರಿಯುವುದನ್ನೇ ತಂಡವೊಂದು ಕಾಯುತ್ತಿದೆ. ಅದು ಯಾವ ತಂಡ ಇಲ್ಲಿದೆ ವಿವರ.

ಈ ಬಾರಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕೂಟ ಪಾಕಿಸ್ತಾನದಲ್ಲೇ ನಡೆಯಲಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ತಂಡ ತೆರಳುವುದು ಅನುಮಾನವಾಗಿದೆ. ಪಾಕಿಸ್ತಾನ ಈಗಾಗಲೇ ಭಾರತ ಆಡುವ ಎಲ್ಲಾ ಪಂದ್ಯಗಳನ್ನು ಲಾಹೋರ್ ನಲ್ಲಿ ನಡೆಸಲು ಆಫರ್ ನೀಡಿದೆ. ಆದರೆ ಭಾರತ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರಕ್ಕೆ ತೆರಳಲು ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು.

ಹೀಗಾಗಿ ಭಾರತ ಆಡಲಿರುವ ಪಂದ್ಯವನ್ನು ಶ್ರೀಲಂಕಾ ಅಥವಾ ಯುಎಇಗೆ ಸ್ಥಳಾಂತರಿಸುವಂತೆ ಬಿಸಿಸಿಐ ಮನವಿ ಮಾಡಿದೆ. ಆದರೆ ಇದಕ್ಕೆ ಪಾಕಿಸ್ತಾನ ಮತ್ತು ಐಸಿಸಿ ಒಪ್ಪದೇ ಹೋದರೆ ಭಾರತ ಕೂಟದಲ್ಲಿ ಭಾಗಿಯಾಗುವುದು ಅನುಮಾನವಾಗಿದೆ. ಹೀಗಾದಲ್ಲಿ ಯಾವ ತಂಡಕ್ಕೆ ಅನುಕೂಲವಾಗಲಿದೆ ಎನ್ನುವುದು ಕುತೂಹಲಕಾರಿಯಾಗಿದೆ.

2023 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಟಾಪ್ 8 ರಲ್ಲಿದ್ದ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಅಂದರೆ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ದ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಟೂರ್ನಿಯಲ್ಲಿ ಆಡುವ ಅರ್ಹತೆ ಪಡೆದಿದೆ.  ಒಂದು ವೇಳೆ ಭಾರತ ತಂಡ ಟೂರ್ನಿಯಿಂದ ಹೊರಗುಳಿದರೆ ಇನ್ನೊಂದು ತಂಡವನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಆಗ ಶ್ರೀಲಂಕಾಗೆ ಅವಕಾಶ ಸಿಗಲಿದೆ. ಹೀಗಾಗಿ ಈಗ ಭಾರತ ಟೂರ್ನಿಯಿಂದ ಹೊರಗುಳಿಯುವುದನ್ನೇ ಲಂಕಾ ತಂಡ ಎದಿರು ನೋಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ