ಕೆಎಲ್ ರಾಹುಲ್ ಬಳಿ ಕೊಹ್ಲಿಗೆ ಶುರುವಾಯ್ತು ಟಿಕೆಟ್ ತಲೆಬಿಸಿ!
ವಿಶ್ವಕಪ್ ಪಂದ್ಯ ವೀಕ್ಷಿಸಲು ಟಿಕೆಟ್ ಗಾಗಿ ಕ್ರಿಕೆಟಿಗರ ಬಳಿ ಸ್ನೇಹಿತರು, ಆಪ್ತರು ಫೋನ್ ಕರೆ, ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದಾರಂತೆ. ಈ ಕಾರಣಕ್ಕೆ ಕೆಎಲ್ ರಾಹುಲ್ ಈಗಾಗಲೇ ಮಾಧ‍್ಯಮಗಳ ಎದುರು ತಮ್ಮ ಸ್ನೇಹಿತರಿಗೆ ಟಿಕೆಟ್ ಕೇಳಿ ಮೆಸೇಜ್ ಮಾಡಬೇಡಿ, ಮಾಡಿದರೂ ಉತ್ತರಿಸಲ್ಲ ಎಂದು ಖಡಕ್ ಆಗಿ ಹೇಳಿದ್ದರು.
ಇದೀಗ ವಿರಾಟ್ ಕೊಹ್ಲಿ ಸರದಿ. ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಟಿಕೆಟ್ ಕೇಳಿ ಯಾರೂ ನಮಗೆ ಮೆಸೇಜ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.