ರಾಜ್ ಕೋಟ್ ತಲುಪಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಮಂಗಳವಾರ, 26 ಸೆಪ್ಟಂಬರ್ 2023 (17:28 IST)
Photo Courtesy: Twitter
ರಾಜ್ ಕೋಟ್: ಆಸ್ಟ್ರೇಲಿಯಾ ವಿರುದ್ಧ ನಾಳೆ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಹಿರಿಯ ಆಟಗಾರ  ವಿರಾಟ್ ಕೊಹ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.

ಇಂದು ರೋಹಿತ್, ಕೊಹ್ಲಿ ಇಬ್ಬರೂ ರಾಜ್ ಕೋಟ್ ಗೆ ಬಂದಿಳಿದಿದ್ದಾರೆ. ಕಳೆದ ಎರಡು ಪಂದ್ಯಗಳಿಂದ ಈ ಇಬ್ಬರೂ ಸ್ಟಾರ್ ಆಟಗಾರರು ಹೊರಗುಳಿದಿದ್ದರು.

ಆದರೆ ಇದೀಗ ವಿಶ್ವಕಪ್ ಪಂದ್ಯಾವಳಿಗೆ ಮುನ್ನ ಅಭ್ಯಾಸ ನಡೆಸಲು ಈ ಪಂದ್ಯದಲ್ಲಿ ಇಬ್ಬರೂ ಸ್ಟಾರ್ ಆಟಗಾರರು ಆಡಲಿದ್ದಾರೆ. ಇದರ ಹೊರತಾಗಿ ಭಾರತ ವಿಶ್ವಕಪ್ ಗೆ ಮುನ್ನ ಇಂಗ್ಲೆಂಡ್ ವಿರುದ್ಧ ಸೆಪ್ಟೆಂಬರ್ 30 ರಂದು ಅಭ್ಯಾಸ ಪಂದ್ಯವಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ