Virat Kohli: ಶ್ರೇಯಸ್ ಅಯ್ಯರ್ ಎದುರು ಸಂಭ್ರಮಾಚರಿಸಿ ತಾವೇ ಇಕ್ಕಟ್ಟಿಗೆ ಸಿಲುಕಿದ ವಿರಾಟ್ ಕೊಹ್ಲಿ: ನಿಮ್ಗಿದು ಬೇಕಿತ್ತಾ
ಬೆಂಗಳೂರಿನಲ್ಲಿ ಆರ್ ಸಿಬಿ ಸೋಲಿಸಿದ ಬಳಿಕ ಶ್ರೇಯಸ್ ಅಯ್ಯರ್ ಸೌಂಡೇ ಕೇಳಿಸ್ತಿಲ್ಲ ಎಂದು ಸನ್ನೆ ಮಾಡಿದ್ದಕ್ಕೆ ಕೊಹ್ಲಿ ನಿನ್ನೆ ಪಂಜಾಬ್ ನಲ್ಲಿ ಗೆದ್ದು ಆ ರೀತಿ ಸೆಲೆಬ್ರೇಷನ್ ಮಾಡಿದ್ದರು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅಸಲಿಗೆ ಶ್ರೇಯಸ್ ಮೊನ್ನೆ ಸೆಲೆಬ್ರೇಷನ್ ಮಾಡಿದ್ದು ಬೆಂಗಳೂರಿನಲ್ಲಲ್ಲ. ಹಳೆಯ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತಮ್ಮ ಎದುರು ಕೊಹ್ಲಿ ಅಣಕಿಸುವಂತೆ ಸಂಭ್ರಮಿಸಿದ್ದಕ್ಕೆ ಶ್ರೇಯಸ್ ಸಿಟ್ಟಾಗಿದ್ದರು. ಕೊಹ್ಲಿ ಸಮಾಧಾನಿಸಲು ಪ್ರಯತ್ನಿಸಿದರೂ ಕೇಳಲಿಲ್ಲ. ಆದರೆ ಪಂದ್ಯದ ಬಳಿಕ ಶ್ರೇಯಸ್, ವಿರಾಟ್ ಬ್ಯಾಟಿಂಗ್ ನ್ನೂ ಹೊಗಳಿ ತಾವು ದೊಡ್ಡವರಾದರು.
ಆದರೆ ಕೊಹ್ಲಿ ಅಣಕಿಸುವಂತೆ ಸೆಲೆಬ್ರೇಷನ್ ಮಾಡಿ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದ್ದಾರೆ. ಇಂತಹದ್ದೊಂದು ಅತಿರೇಕದ ಸೆಲೆಬ್ರೇಷನ್ ಬೇಕಿತ್ತಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ.