Virat Kohli: ಯಡವಟ್ಟಾಯ್ತು... ನಟಿ ಅವನೀತ್ ಕೌರ್ ಪೋಸ್ಟ್ ಗೆ ಲೈಕ್ ಮಾಡಿದ್ರಾ ವಿರಾಟ್ ಕೊಹ್ಲಿ: ಕ್ರಿಕೆಟಿಗ ಕೊಟ್ಟ ಸ್ಪಷ್ಟನೆ ಏನು
ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ ಅವನೀತ್ ಕೌರ್ ಅವರ ಫೋಟೋವೊಂದನ್ನು ಲೈಕ್ ಮಾಡಿರುವ ನೋಟಿಫಿಕೇಷನ್ ನೋಡಿ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದರು. ಇದನ್ನು ನೋಡಿದ್ರೆ ಅನುಷ್ಕಾ ಸುಮ್ನೇ ಬಿಡ್ತಾರಾ ಎಂದೂ ಕೆಲವರು ಕಿಚಾಯಿಸಿದ್ದರು.
ಆದರೆ ಇದು ವೈರಲ್ ಆಗುತ್ತಿದ್ದಂತೇ ಕೊಹ್ಲಿ ಸ್ಪಷ್ಟನೆ ಕೊಟ್ಟರು. ನಾನು ಯಾವುದೇ ಪೋಸ್ಟ್ ಲೈಕ್ ಮಾಡಿಲ್ಲ. ಇನ್ ಸ್ಟಾಗ್ರಾಂ ಫೀಡ್ ಕ್ಲಿಯರ್ ಮಾಡುವಾಗ ಅಲ್ಗೋರಿದಮ್ ನಲ್ಲಿರುವ ಸಮಸ್ಯೆಯಿಂದಾಗಿ ಈ ರೀತಿ ಆಗಿರಬಹುದು. ಇದಕ್ಕೆ ಅನ್ಯ ಅರ್ಥ ಕಲ್ಪಿಸಬೇಡಿ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಮತ್ತು ಅವನೀತ್ ಕೌರ್ ಗೆ ಸಂದೇಶಗಳನ್ನು ಕಳುಹಿಸಿದ್ದು ಈ ಯಡವಟ್ಟಿಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿದ್ದಾರೆ.