ರೋಹಿತ್ ಶರ್ಮಾ ಮಗನ ಮುದ್ದಾಡಿದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ: ವಿಡಿಯೋ

Krishnaveni K

ಸೋಮವಾರ, 3 ಮಾರ್ಚ್ 2025 (10:51 IST)
Photo Credit: X
ದುಬೈ: ಚಾಂಪಿಯನ್ಸ್ ಟ್ರೋಫಿ 2025 ರ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ವೀಕ್ಷಿಸಲು  ಬಂದ ರೋಹಿತ್ ಶರ್ಮಾ ಪುಟಾಣಿ ಮಗ ಆಹಾನ್ ನನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮುದ್ದಾಡಿದ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ.

ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪತ್ನಿಯರು ದುಬೈನಲ್ಲಿದ್ದಾರೆ. ತಂಡದ ಜೊತೆಗಿರಲು ಸಾಧ್ಯವಿರದ ಕಾರಣ ಖಾಸಗಿಯಾಗಿ ಟ್ರಾವೆಲ್ ಮಾಡುತ್ತಿದ್ದಾರೆ.

ನಿನ್ನೆಯ ಪಂದ್ಯದ ವೇಳೆಯೂ ರೋಹಿತ್ ಮತ್ತು ಕೊಹ್ಲಿ ಪತ್ನಿ ಅಕ್ಕಪಕ್ಕವೇ ಕೂತು ಪಂದ್ಯ ವೀಕ್ಷಿಸಿದ್ದಾರೆ. ವಿಶೇಷವೆಂದರೆ ರೋಹಿತ್ ಪತ್ನಿ ರಿತಿಕಾ ಜೊತೆ ಪುಟಾಣಿ ಆಹಾನ್ ಕೂಡಾ ಮೈದಾನದಲ್ಲಿದ್ದ.

ಈ ವೇಳೆ ರಿತಿಕಾ ಹೆಗಲ ಮೇಲೆ ಮಲಗಿದ್ದ ಆಹಾನ್ ನ್ನು ಅನುಷ್ಕಾ ಮುದ್ದಾಗಿ ಮಾತನಾಡಿಸುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ahaan Rohit Sharma ????❤️ pic.twitter.com/MSJFGXEDJB

— Rohit Sharma 45 (@rohitfcofficial) March 2, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ