ವಿರಾಟ್ ಕೊಹ್ಲಿ ಈ ವಿಚಾರದಲ್ಲಿ ಕ್ರಿಸ್ ಗೇಲ್ ಗಿಂತಲೂ ಕಠಿಣವಂತೆ!

ಶುಕ್ರವಾರ, 4 ಮೇ 2018 (08:54 IST)
ಬೆಂಗಳೂರು: ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾಗಿದ್ದರೂ ಟೀಂ ಇಂಡಿಯಾ ಸ್ಪಿನ್ನರ್, ಕೆಕೆಆರ್ ಕ್ರಿಕೆಟಿಗ ಕುಲದೀಪ್ ಯಾದವ್ ಗೆ ಮಾತ್ರ ವಿರಾಟ್ ಕೊಹ್ಲಿಯೆಂದರೆ ಭಯ ಹುಟ್ಟುದಂತೆ!

ಕ್ರಿಸ್ ಗೇಲ್ ಭರ್ಜರಿ ಹೊಡೆತಗಳ ಆಟಗಾರನೇ ಇರಬಹುದು. ಆದರೆ ವಿರಾಟ್ ಕೊಹ್ಲಿಗೆ ಬಾಲ್ ಮಾಡುವುದೆಂದರೆ ಭಯ ಕಾಡುತ್ತದೆ ಎಂದು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ನಾಯಕ ಕೊಹ್ಲಿ ಪ್ರತೀ ಬಾಲ್ ಗೂ ರನ್ ಹುಡುಕುತ್ತಿರುತ್ತಾರೆ. ಡಾಟ್ ಬಾಲ್ ಹಾಕಿದರೂ ಕೆಲವೊಮ್ಮೆ ಶಿಕ್ಷಿಸುವ ಛಾತಿ ಇರುವ ಆಟಗಾರ ಅವರು. ಕ್ರಿಸ್ ಗೇಲ್ ಬೌಂಡರಿ, ಸಿಕ್ಸರ್ ಹೊಡೆಯಬಲ್ಲರು. ಆದರೆ ಸಿಂಗಲ್ಸ್, ಡಬಲ್ಸ್ ತೆಗೆದು ಬೌಲರ್ ಗಳ ಮೇಲೆ ಒತ್ತಡ ಹೇರುವುದಿಲ್ಲ’ ಎಂದು ಕುಲದೀಪ್ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ