ನಿನ್ನೆಯ ಪಂದ್ಯದಲ್ಲಿ ರೋಹಿತ್ ಆಸ್ಟ್ರೇಲಿಯಾ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿ 41 ಎಸೆತಗಳಿಂದ 92 ರನ್ ಗಳಿಸಿದ್ದಾಗ ಔಟಾದರು. ಅರ್ಹ ಶತಕವೊಂದು ಅವರಿಗೆ ಮಿಸ್ ಆಗಿತ್ತು. ಆದರೆ ಆಗಲೇ ತಂಡಕ್ಕೆ ಬೇಕಾದಂತಹ ಭದ್ರ ಅಡಿಪಾಯ ಅವರು ಹಾಕಿಕೊಟ್ಟಿದ್ದರು. ಅದರಲ್ಲೂ ಅವರು ಸಿಡಿಸಿದ 8 ಸಿಕ್ಸರ್ ಗಳ ಪೈಕಿ ಒಮ್ಮೆಯಂತೂ ಬಾಲ್ ಮೈದಾನದಾಚೆ ದಾಟಿತ್ತು. ಇದು ಅವರ ಬ್ಯಾಟಿಂಗ್ ಅಬ್ಬರಕ್ಕೆ ಸಾಕ್ಷಿಯಾಗಿತ್ತು.
ರೋಹಿತ್ ಈ ಸಿಡಿಲಬ್ಬದ ಬ್ಯಾಟಿಂಗ್ ಮಾಡಿ 92 ರನ್ ಗಳಿಸಿ ಔಟಾದಾಗ ಎಲ್ಲರಲ್ಲೂ ನಿರಾಸೆಯಿತ್ತು. ಆದರೆ ಈ ಇನಿಂಗ್ಸ್ ಯಾವ ಶತಕಕ್ಕೂ ಕಮ್ಮಿಯಿರಲಿಲ್ಲ. ಹೀಗಾಗಿ ಇಡೀ ಮೈದಾನವೇ ಎದ್ದು ನಿಂತು ರೋಹಿತ್ ಗೆ ಸೆಲ್ಯೂಟ್ ಮಾಡಿತ್ತು. ಡಗೌಟ್ ನಲ್ಲಿ ಕುಳಿತಿದ್ದ ಟೀಂ ಇಂಡಿಯಾ ಆಟಗಾರರು, ಸಿಬ್ಬಂದಿಗಳೂ ರೋಹಿತ್ ಗೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.