ಚಾಂಪಿಯನ್ಸ್ ಟ್ರೋಫಿ ಗೆದ್ದು ತವರಿಗೆ ಬಂದ ರೋಹಿತ್ ಶರ್ಮಾರನ್ನು ಮುತ್ತಿಕೊಂಡ ಫ್ಯಾನ್ಸ್
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಸೋಲಿಸಿದ ಟೀಂ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿತ್ತು. ಇದಾದ ಬಳಿಕ ನಿನ್ನೆ ರಾತ್ರಿಯೇ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ತವರಿಗೆ ಬಂದಿದ್ದಾರೆ.
ರೋಹಿತ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದು ಅವರನ್ನು ಸ್ವಾಗತಿಸಿದ್ದಾರೆ. ರೋಹಿತ್ ಗೆ ಕಾರು ಹತ್ತಲೂ ಕಷ್ಟವಾಗುವಷ್ಟು ಜನ ಅಲ್ಲಿ ಸೇರಿದ್ದರು. ಎಲ್ಲರತ್ತ ಕೈ ಬೀಸಿ ರೋಹಿತ್ ಕಾರಿನಲ್ಲಿ ತೆರಳಿದ್ದಾರೆ.
ಇನ್ನು ಕೋಚ್ ಗೌತಮ್ ಗಂಭೀರ್ ಕೂಡಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಅವರಿಗೂ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ. ಇತರೆ ಆಟಗಾರರು ಇನ್ನಷ್ಟೇ ಪ್ರತ್ಯೇಕವಾಗಿ ಭಾರತಕ್ಕೆ ಬಂದಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.