ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹಿರಿಮೆಗೆ ಜಯ್ ಶಾ ಪಾತ್ರರಾಗಿದ್ದರು. ಅವರು ಐಸಿಸಿ ಅಧ್ಯಕ್ಷರಾಗಲು ಐಸಿಸಿಯ ಎಲ್ಲಾ ಸದಸ್ಯರೂ ವೋಟ್ ಮಾಡಬೇಕು. ಅದರಂತೆ ಜಯ್ ಶಾಗೆ ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ರಾಷ್ಟ್ರಗಳ ಬೆಂಬಲವಿತ್ತು.
ಆದರೆ ಪಾಕಿಸ್ತಾನ ಮಾತ್ರ ಜಯ್ ಶಾ ವಿರುದ್ಧವಾಗಿ ವೋಟ್ ಹಾಕುವ ಮೂಲಕ ಜಯ್ ಶಾ ಅಧ್ಯಕ್ಷರಾಗುವುದು ತಮಗೆ ಇಷ್ಟವಿಲ್ಲ ಎಂದು ತೋರಿಸಿಕೊಟ್ಟಿದೆ. ಈ ಚುನಾವಣೆಯಲ್ಲಿ ಪಾಕಿಸ್ತಾನ ತಟಸ್ಥವಾಗಿರಲು ತೀರ್ಮಾನಿಸಿತ್ತು. ಜಯ್ ಶಾ ಅಧ್ಯಕ್ಷರಾದರೆ ಎಲ್ಲಿ ತನ್ನ ರಾಷ್ಟ್ರದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಅಡ್ಡಿಯಾಗುತ್ತಾರೋ ಎಂಬ ಆತಂಕ ಪಾಕಿಸ್ತಾನಕ್ಕಿದೆ. ಈ ಕಾರಣಕ್ಕೆ ಅವರು ಅಧ್ಯಕ್ಷರಾಗುವುದು ಆ ದೇಶಕ್ಕೆ ಇಷ್ಟವಿಲ್ಲ. ಹಾಗಿದ್ದರೂ 16 ರ ಪೈಕಿ 15 ಮತಗಳು ಬಂದಿದ್ದರಿಂದ ಜಯ್ ಶಾ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.