ಆರಂಭದಲ್ಲಿ ಬೌಲಿಂಗ್ ಮಾಡುವ ಜಸ್ಪ್ರೀತ್ ಬುಮ್ರಾ ಫೀಲ್ಡಿಂಗ್ ಯಾಕೆ ಮಾಡಲ್ಲ?

ಶುಕ್ರವಾರ, 15 ಸೆಪ್ಟಂಬರ್ 2023 (08:40 IST)
Photo Courtesy: Twitter
ಕೊಲೊಂಬೊ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಜಸ್ಪ್ರೀತ್ ಬುಮ್ರಾ ಆರಂಭದಲ್ಲಿ ಬೌಲಿಂಗ್ ಮಾಡಿ ಮತ್ತೆ ಪೆವಿಲಿಯನ್ ಸೇರಿಕೊಳ್ಳುತ್ತಿದ್ದಾರೆ. ಇದ್ಯಾಕೆ ಹೀಗೆ?

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಆರಂಭದಲ್ಲಿ 5 ಓವರ್ ನಡೆಸಿ ಬಳಿಕ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಲಂಕಾ ವಿರುದ್ಧದ ಪಂದ್ಯದಲ್ಲೂ 5 ಓವರ್ ಸ್ಪೆಲ್ ಬಳಿಕ ಪೆವಿಲಿಯನ್ ಸೇರಿಕೊಂಡರು. ಈ ಎರಡೂ ಪಂದ್ಯಗಳಲ್ಲಿ ಬುಮ್ರಾ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದರು.

ಜಸ್ಪ್ರೀತ್ ಬುಮ್ರಾ ಭಾರತದ ಬೌಲಿಂಗ್ ಪ್ರಮುಖ ಅಸ್ತ್ರ. ಮುಂಬರುವ ಏಕದಿನ ವಿಶ್ವಕಪ್ ನಲ್ಲಿ ಅವರು ಫಿಟ್ ಆಗಿ ತಂಡದಲ್ಲಿರುವುದು ಮುಖ್ಯ. ಕಳೆದ ಒಂದು ವರ್ಷದಿಂದ ಗಾಯದಿಂದಾಗಿ ಹೊರಗಿದ್ದ ಬುಮ್ರಾ ಈಗಷ್ಟೇ ತಂಡಕ್ಕೆ ವಾಪಸ್ ಆಗಿದ್ದಾರೆ. ಹೀಗಾಗಿ ವಿಶ್ವಕಪ್ ನ ಪ್ರಮುಖ ಘಟ್ಟದಲ್ಲಿ ಬುಮ್ರಾ ಮತ್ತೆ ಗಾಯಕ್ಕೊಳಗಾಗದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಅದಲ್ಲದೆ ನಿನ್ನೆಯ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಬುಮ್ರಾಗೆ ಸಣ್ಣದಾಗಿ ಪಾದ ಟ್ವಿಸ್ಟ್ ಆಗಿತ್ತು. ಬಳಿಕ ಅವರು ತಮ್ಮ ಬೌಲಿಂಗ್ ಪೂರ್ತಿ ಮಾಡಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಬುಮ್ರಾರನ್ನು ಸೂಕ್ಷ್ಮವಾಗಿ ಹ್ಯಾಂಡಲ್ ಮಾಡುತ್ತಿದೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ