Virat Kohli: ಎಲ್ಲಾ ಬಿಟ್ಟು ಫಾರ್ಮ್ ಕಂಡುಕೊಳ್ಳಲು ವಿರಾಟ್ ಕೊಹ್ಲಿ ಇವರನ್ನೇ ಆಯ್ಕೆ ಮಾಡಿದ್ದೇಕೆ
ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಿಂದ ಹೇಳಿಕೊಳ್ಳುವಂತಹ ಫಾರ್ಮ್ ನಲ್ಲಿಲ್ಲ. ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ಸರಣಿಯಲ್ಲೂ ವಿಫಲರಾಗಿದ್ದರು. ಈ ಕಾರಣಕ್ಕೆ ಅವರನ್ನೂ ತಂಡದಿಂದ ಕಿತ್ತು ಹಾಕಬೇಕು, ನಿವೃತ್ತಿಯಾಗಲಿ ಎಂಬಿತ್ಯಾದಿ ಸಲಹೆಗಳು ಕೇಳಿಬರುತ್ತಲೇ ಇದೆ.
ಅದರಲ್ಲೂ ವಿಶೇಷವಾಗಿ ಕೊಹ್ಲಿ ಪದೇ ಪದೇ ಆಫ್ ಸ್ಟಂಪ್ ಆಚೆ ಹೋಗುವ ಬಾಲ್ ನ್ನೇ ಕೆಣಕಿ ಔಟಾಗುತ್ತಿದ್ದಾರೆ. ಮಾಡಿದ ತಪ್ಪನ್ನೇ ಪದೇ ಪದೇ ಮಾಡುತ್ತಿರುವುದೂ ಅವರ ಮೇಲೆ ಟೀಕೆ ಹೆಚ್ಚಾಗಲು ಕಾರಣವಾಗಿದೆ. ಈ ಕಾರಣಕ್ಕೇ ಕೊಹ್ಲಿ ಈಗ ತಮ್ಮ ಬ್ಯಾಟಿಂಗ್ ಸುಧಾರಿಸಲು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮೊರೆ ಹೋಗಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ಸಂಜಯ್ ಬಂಗಾರ್ ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದರು. ಅವರು ಕೋಚ್ ಆಗಿದ್ದಾಗ ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಹೀಗಾಗಿ ಕೊಹ್ಲಿ ಎಲ್ಲರನ್ನೂ ಬಿಟ್ಟು ಸಂಜಯ್ ಬಂಗಾರ್ ಸಹಾಯ ಪಡೆಯುತ್ತಿದ್ದಾರೆ. ಜನವರಿ 30 ರಿಂದ ದೆಹಲಿ ಪರವಾಗಿ ಅವರು ರಣಜಿ ಪಂದ್ಯವನ್ನೂ ಆಡಲಿದ್ದಾರೆ. ಈ ಪಂದ್ಯಕ್ಕೆ ಅಭ್ಯಾಸ ಆರಂಭಿಸಿರುವ ಅವರು ಸಂಜಯ್ ಬಂಗಾರ್ ಮಾರ್ಗದರ್ಶನ ಪಡೆಯುತ್ತಿದ್ದಾರೆ.