ಮಹಿಳಾ ಟಿ20 ವಿಶ್ವಕಪ್: ಲಂಕಾ ವಿರುದ್ಧ ಭಾರತೀಯ ವನಿತೆಯರ ಭರ್ಜರಿ ಗೆಲುವು

ಶನಿವಾರ, 29 ಫೆಬ್ರವರಿ 2020 (12:13 IST)
ಮೆಲ್ಬೋರ್ನ್: ಇಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ ಕೂಟದ ಭಾರತ-ಶ್ರೀಲಂಕಾ ನಡುವಿನ ಪಂದ್ಯವನ್ನು ಭಾರತೀಯ ಮಹಿಳೆಯರು ಭರ್ಜರಿಯಾಗಿ 7 ವಿಕೆಟ್ ಗಳಿಂದ ಗೆದ್ದುಕೊಂಡಿದ್ದಾರೆ.


ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಬಲಾಢ್ಯ ಬ್ಯಾಟಿಂಗ್ ಶಕ್ತಿಯ ಎದುರು ಇದು ತೀರಾ ಸಾಧಾರಣ ಗುರಿಯಾಯಿತು. ಭಾರತದ ಪರ ರಾಧಾ ಯಾದವ್4 ವಿಕೆಟ್, ರಾಜೇಶ್ವರಿ ಗಾಯಕ್ ವಾಡ್ 2 ಮತ್ತು ಉಳಿದೆಲ್ಲಾ ಬೌಲರ್ ಗಳೂ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.

ಈ ಮೊತ್ತವನ್ನು ಬೆನ್ನತ್ತಿದ ಭಾರತೀಯ ವನಿತೆಯರ ತಂಡ ಭರ್ಜರಿಯಾಗಿಯೇ ಬ್ಯಾಟಿಂಗ್ ಮಾಡಿತು. ಮತ್ತೆ ಮಿಂಚಿದ ಆರಂಭಿಕ ಆಟಗಾರ್ತಿ ಶಿಫಾಲಿ ವರ್ಮಾ ಹೊಡೆಬಡಿಯ ಬ್ಯಾಟಿಂಗ್ ಪ್ರದರ್ಶಿಸಿ 47 ರನ್ ಸಿಡಿಸಿದರು. ಸ್ಮೃತಿ ಮಂಧನ 17 ರನ್ ಗಳಿಸಿದರೆ ನಾಯಕಿ ಹರ್ಮನ್ ಪ್ರೀತ್ ಕೌರ್ 15 ರನ್ ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭಾರತ 14.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 116 ರನ್ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ಭಾರತ ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಜೇಯ ಓಟ ಮುಂದುವರಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ