ಬೆಂಗಳೂರು: ಡಬ್ಲ್ಲುಪಿಎಲ್ ರ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನಲ್ಲಿ ತಾವು ಸ್ಟ್ರಾಂಗ್ ಟೀಂ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಹರ್ಲಿನ್ ಡಿಯೋಲ್ 22 ರನ್ ಗಳಿಸಿದರು. ಆದರೆ ಅಗ್ರ ಕ್ರಮಾಂಕದ ಬ್ಯಾಟಿಗರು ಅವರಿಗೆ ತಕ್ಕ ಸಾಥ್ ನೀಡಲಿಲ್ಲ. ಕೆಳ ಕ್ರಮಾಂಕದಲ್ಲಿ ದಯಾಳನ್ ಹೇಮಲತಾ 31 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಆರು ಬ್ಯಾಟಿಗರದ್ದು ಏಕಂಕಿ ಸ್ಕೋರ್.
ರಾಯಲ್ ಚಾಲೆಂಜರ್ಸ್ ಪರ ಇಂದು ಭಾರತೀಯ ತಾರೆ ರೇಣುಕಾ ಸಿಂಗ್ ಅಗ್ರ ಎರಡು ವಿಕೆಟ್ ಕಬಳಿಸಿದರು. ಮತ್ತೊಂದೆಡೆ ಸೋಫಿ ಮೊಲಿನಕ್ಸ್ 3 ವಿಕೆಟ್ ಕಬಳಿಸಿ ಮಿಂಚಿದರು. ಆದರೆ ಸ್ಟಾರ್ ಬೌಲರ್ ಗಳಾದ ಎಲ್ಸಿ ಪೆರಿ, ಸೋಫಿ ಡಿವೈನ್ ಮತ್ತೆ ವಿಕೆಟ್ ಕೀಳಲು ವಿಫಲರಾದರು.
ಇಂದು ಆರ್ ಸಿಬಿ ಪರ ಒಟ್ಟು ಏಳು ಮಂದಿ ಬೌಲಿಂಗ್ ಮಾಡಿದ್ದು ವಿಶೇಷ. ಎಲ್ಲೂ ಎದುರಾಳಿಗಳು ತಲೆಯೆತ್ತದಂತೇ ನಿಯಮಿತವಾಗಿ ವಿಕೆಟ್ ಕೀಳುತ್ತಾ ಸಾಗಿದ ಆರ್ ಸಿಬಿ ಬೌಲರ್ ಗಳ ಇಂದಿನ ಪ್ರದರ್ಶನ ಅಭಿನಂದನಾರ್ಹವಾಗಿತ್ತು. ಇದೀಗ ಗೆಲುವಿಗೆ 108 ರನ್ ಗಳಿಸಬೇಕಿದೆ.