ಕರ್ನಾಟಕದ ರಣಜಿ ಟ್ರೋಫಿ ಗೆಲ್ಲುವ ಕನಸು ಭಗ್ನ

Krishnaveni K

ಮಂಗಳವಾರ, 27 ಫೆಬ್ರವರಿ 2024 (15:34 IST)
Photo Courtesy: Twitter
ನಾಗ್ಪುರ: ಈ ಬಾರಿ ರಣಜಿ ಟ್ರೋಫಿ ಗೆಲ್ಲುವ ಕರ್ನಾಟಕದ ಕನಸು ಭಗ್ನವಾಗಿದೆ. ಕ್ವಾರ್ಟರ್ ಫೈನಲ್ ಹಂತದಲ್ಲಿಯೇ ರಾಜ್ಯ ತಂಡ ಸೋತು ನಿರ್ಗಮಿಸಿದೆ.

ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ವಿದರ್ಭದ ಎದುರು 127 ರನ್ ಗಳಿಂದ ಸೋತು ರಣಜಿ ಟ್ರೋಫಿಯಿಂದ ಹೊರಬಿದ್ದಿದೆ. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ವಿದರ್ಭ ಮೊದಲ ಇನಿಂಗ್ಸ್ ನಲ್ಲಿ 460 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 196 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 286 ಮತ್ತು ದ್ವಿತೀಯ ಇನಿಂಗ್ಸ್ ನಲ್ಲಿ 243 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲುಂಡಿತು.

ಈ ಸೀಸನ್ ನಲ್ಲೂ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಕರ್ನಾಟಕ ನಿರ್ಣಾಯಕ ಹಂತದಲ್ಲಿ ಮತ್ತೆ ಮುಗ್ಗರಿಸಿದೆ. ಮೊದಲ ಇನಿಂಗ್ಸ್ ನಲ್ಲೇ ಭಾರೀ ಹಿನ್ನಡೆ ಅನುಭವಿಸಿದ್ದ ಕರ್ನಾಟಕಕ್ಕೆ ದ್ವಿತೀಯ ಇನಿಂಗ್ಸ್ ನಲ್ಲೂ ಬ್ಯಾಟಿಗರು ಕೈಕೊಟ್ಟರು.

ಒಟ್ಟು 8 ತಂಡಗಳ ನಡುವೆ 4 ಕ್ವಾರ್ಟರ್ ಫೈನಲ್ ಪಂದ್ಯ ನಡೆದಿದೆ. ಇದರಲ್ಲಿ ತಮಿಳುನಾಡು ಮೊದಲು ಜಯ ಗಳಿಸಿದೆ. ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ಗೆಲುವು ಕಂಡಿದೆ. ಇನ್ನೊಂದು ಪಂದ್ಯದಲ್ಲಿ ಬರೋಡಾಗೆ ಗೆಲ್ಲಲು ಮುಂಬೈ 606  ರನ್ ಗಳ ಗುರಿ ನೀಡಿತ್ತು. ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ