ಮನೆಯಲ್ಲಿ ತಿಂಡಿ ತಿನ್ನಬೇಕಾದರೂ ಅಳೆದು ತೂಗಿ ತಿನ್ನಬೇಕು: ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಕಂಪ್ಲೇಂಟ್!

ಗುರುವಾರ, 9 ಜುಲೈ 2020 (09:08 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ವಿಚಾರದಲ್ಲಿ ಎಷ್ಟು ಕಟ್ಟುನಿಟ್ಟು ಎಂದು ಎಲ್ಲರಿಗೂ ಗೊತ್ತು. ಇದನ್ನು ಪಾಲಿಸಲು ತಮ್ಮೊಂದಿಗಿರುವವರಿಗೂ ಕೊಹ್ಲಿ ಸಲಹೆ ನೀಡುತ್ತಾರೆ.


ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೊಹ್ಲಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ತಮ್ಮ ಮೆಚ್ಚಿನ ಖಾದ್ಯಗಳನ್ನೇ ಸೇವಿಸುವುದನ್ನೇ ಬಿಟ್ಟಿದ್ದಾರೆ. ಇಂತಿಪ್ಪ ಕೊಹ್ಲಿ ಮನೆಯಲ್ಲಿ ತಿಂಡಿ ತಿನ್ನಬೇಕಾದರೂ ಅಳೆದು ತೂಗಿ ಸೇವಿಸುವಂತೆ ಮಾಡುತ್ತಾರೆ ಎಂದು ಪತ್ನಿ ಅನುಷ್ಕಾ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪತಿಯ ಕಾಲೆಳೆದಿದ್ದಾರೆ.

ತಿಂಡಿಯ ಬೌಲ್ ‍ನ್ನು ತೂಕದ ಮೆಷಿನ್ ಮೇಲಿಟ್ಟು ಅಳೆಯುತ್ತಿರುವ ವಿಡಿಯೋ ಪ್ರಕಟಿಸಿರುವ ಅನುಷ್ಕಾ ಎಲ್ಲವೂ ಕೊಹ್ಲಿಯ ಮಹಿಮೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ