ಭುವನೇಶ್ವರ್ ಕುಮಾರ್ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿದ ಪತ್ನಿ!

ಮಂಗಳವಾರ, 24 ಮಾರ್ಚ್ 2020 (09:37 IST)
ಮುಂಬೈ: ಸಾಮಾನ್ಯವಾಗಿ ಸೈಬರ್ ಖದೀಮರು ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಖಾತೆ ಹ್ಯಾಕ್ ಮಾಡಿ ದುರ್ಬಳಕೆ ಮಾಡುತ್ತಾರೆ. ಆದರೆ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಪ್ರಕರಣದಲ್ಲಿ ಇದು ಉಲ್ಟಾ ಆಗಿದೆ.


ಭುವಿ ಫೇಸ್ ಬುಕ್ ಖಾತೆಯನ್ನು ಸ್ವತಃ ಅವರ ಪತ್ನಿ ನೂಪುರ್ ಹ್ಯಾಕ್ ಮಾಡಿದ್ದಾರಂತೆ! ಒಂದು ದಿನ ನನ್ನ ಪತ್ನಿ ಫೇಸ್ ಬುಕ್ ಫಾಸ್ ವರ್ಡ್ ಕೇಳಿದಳು. ನಾನು ಕೊಡಲಿಲ್ಲ. ಮರುದಿನ ಅವಳು ಇದು ನಿನ್ನ ಫೇಸ್ ಬುಕ್ ನ ಹೊಸ ಪಾಸ್ ವರ್ಡ್ ಎಂದು ತೋರಿಸುತ್ತಾಳೆ. ಅಕ್ಷರಶಃ ಅವಳು ನನ್ನ ಫೇಸ್ ಬುಕ್ ಹ್ಯಾಕ್ ಮಾಡಿದ್ದಳು ಎಂದಿದ್ದಾರೆ ಭುವಿ.

ಅದಾದ ಬಳಿಕ ಭುವಿ ಫೇಸ್ ಬುಕ್ ಬಳಸುವುದನ್ನೇ ಬಿಟ್ಟರಂತೆ! ಭುವಿ ಪತ್ನಿಗೆ ಮಹಿಳಾ ಅಭಿಮಾನಿಗಳು ತನ್ನ ಪತಿಗೆ ಅಂಟಿಕೊಂಡಂತೆ ನಿಂತು ಸೆಲ್ಫೀ ತೆಗೆಸಿಕೊಳ್ಳುವುದು ಇಷ್ಟವೇ ಇಲ್ಲವಂತೆ. ಆಕೆಗೆ ಇದೆಲ್ಲಾ ನೋಡಿದರೆ ಹೊಟ್ಟೆ ಉರಿಯುತ್ತದಂತೆ. ಈ ವಿಚಾರವನ್ನು ದಂಪತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ