ಐಪಿಎಲ್ ನಲ್ಲಿ ಗಾಯಗೊಂಡಿರೋ ಜೋಕೆ! ಟೀಂ ಇಂಡಿಯಾ ಕ್ರಿಕೆಟಿಗರಿಗೆ ರವಿಶಾಸ್ತ್ರಿ ಎಚ್ಚರಿಕೆ
ಭಾನುವಾರ, 17 ಮಾರ್ಚ್ 2019 (08:44 IST)
ಮುಂಬೈ: ಐಪಿಎಲ್ ಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ. ಆದರೆ ಐಪಿಎಲ್ ಗುಂಗಿನಲ್ಲಿ ನಂತರ ಬರುವ ವಿಶ್ವಕಪ್ ಕ್ರಿಕೆಟ್ ಮರೆಯುವಂತಿಲ್ಲ ಎಂದು ಟೀಂ ಇಂಡಿಯಾ ಆಟಗಾರರಿಗೆ ಕೋಚ್ ರವಿಶಾಸ್ತ್ರಿ ಎಚ್ಚರಿಸಿದ್ದಾರೆ.
ಐಪಿಎಲ್ ನಲ್ಲಿ ಪ್ರಮುಖರು ಗಾಯಗೊಂಡರೆ ಎಂಬುದೇ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್, ನಾಯಕ, ಕೋಚ್ ಗಿರುವ ದೊಡ್ಡ ಚಿಂತೆ. ಅದನ್ನೇ ರವಿಶಾಸ್ತ್ರಿ ಈಗ ಮತ್ತೆ ಒತ್ತಿ ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೋಚ್ ರವಿಶಾಸ್ತ್ರಿ ‘ಆಟಗಾರರು ಐಪಿಎಲ್ ನಲ್ಲಿ ಗಾಯಗೊಂಡರೆ ಎಂಬುದೇ ಈಗ ದೊಡ್ಡ ಚಿಂತೆ. ಐಪಿಎಲ್ ಆದ ತಕ್ಷಣವೇ ವಿಶ್ವಕಪ್ ಇರುವುದರಿಂದ ಗಾಯದ್ದೇ ದೊಡ್ಡ ಚಿಂತೆಯಾಗಿದೆ. ನನಗೆ ಈಗ ಇದೇ ಚಿಂತೆ ಹಚ್ಚಿಕೊಂಡಿದೆ. ಎಲ್ಲಾ ಪಂದ್ಯಗಳನ್ನೂ ಇದೇ ಕಾರಣಕ್ಕೆ ಕುತೂಹಲದಿಂದ ನೋಡುತ್ತೇನೆ’ ಎಂದು ರವಿಶಾಸ್ತ್ರಿ ಕಳವಳ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ