ಧೋನಿಗೆ 43ನೇ ಬರ್ತ್‌ಡೇ ಸಂಭ್ರಮ: ಮಹಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ

Sampriya

ಭಾನುವಾರ, 7 ಜುಲೈ 2024 (13:46 IST)
Photo Courtesy X
ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇಂದು 43ನೇ ಬರ್ತ್‌ಡೇ ಸಂಭ್ರಮ. ಬರ್ತ್‌ಡೇ ಸಂಭ್ರಮವನ್ನು ಧೋನಿ ಅವರು ಪತ್ನಿ ಸಾಕ್ಷಿ ಅವರೊಂದಿಗೆ ಆಚರಿಸಿದ್ದಾರೆ.

ಮುಕೇಶ್‌ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆ ನಿಮಿತ್ತ ಮುಂಬೈನಲ್ಲಿರುವ ಧೋನಿ ದಂಪತಿ ಹೊಟೇಲ್​ ರೂಮ್​ನಲ್ಲಿ ಆಪ್ತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಸಾಕ್ಷಿ ಮಹೇಂದ್ರ ಸಿಂಗ್ ಧೋನಿ ಅವರ ಪಾದ ಮುಟ್ಟಿ ನಮಸ್ಕರಿಸಿದರು.

ಅತ್ತ ಪತ್ನಿಯು ಆಶೀರ್ವಾದ ಪಡೆಯುತ್ತಿದ್ದಂತೆ ಇತ್ತ ಧೋನಿಯು ಗೆದ್ದು ಬಾ ಎನ್ನುವ ಮೂಲಕ ಕಾಲೆಳೆದಿದ್ದಾರೆ. ಇದೀಗ ಧೋನಿ ದಂಪತಿಯ ಈ ಫನ್ನಿ ವಿಡಿಯೋವನ್ನು ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್​​ನಲ್ಲಿ ಮುಂದುವರೆದಿದ್ದಾರೆ. ಆದರೆ ಕಳೆದ ಬಾರಿ ಸಿಎಸ್​ಕೆ ತಂಡದ ನಾಯಕತ್ವ ತ್ಯಜಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ