ನಾನು ರನ್ ಗಳಿಸುವಾಗ ಎಲ್ಲರೂ ಇಷ್ಟಪಡುತ್ತಾರೆ! ಕೆಎಲ್ ರಾಹುಲ್ ಬೇಸರದ ಮಾತು

ಶನಿವಾರ, 7 ಡಿಸೆಂಬರ್ 2019 (09:29 IST)
ಹೈದರಾಬಾದ್: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಪ್ರದರ್ಶಿಸಿದ್ದ ಫಾರ್ಮ್ ನ್ನು ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯದಲ್ಲೂ ಮುಂದುವರಿಸಿದ್ದ ಕನ್ನಡಿಗ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮ್ಮ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.


ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡುವಾಗ ನಾಯಕ ಕೊಹ್ಲಿಗೆ ಸಾಥ್ ನೀಡಿದ ರಾಹುಲ್ 40 ಎಸೆತಗಳಲ್ಲಿ 62 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ಬಳಿಕ ತಮ್ಮ ಇನಿಂಗ್ಸ್ ಬಗ್ಗೆ ಮಾತನಾಡಿದ ರಾಹುಲ್ ‘ನಾನು ರನ್ ಗಳಿಸುವಾಗ ಎಲ್ಲರೂ ಇಷ್ಟಪಡುತ್ತಾರೆ. ರನ್ ಗಳಿಸದೇ ಇದ್ದಾಗ ಯಾರಿಗೂ ನಾನು ಇಷ್ಟವಾಗಲ್ಲ. ನಾನು ನನ್ನ ಇನಿಂಗ್ಸ್ ನ್ನು ಯೋಜಿತವಾಗಿ ಆಡಿಲ್ಲ. ಪರಿಸ್ಥಿತಿಗೆ ತಕ್ಕಂತೆ ಇನಿಂಗ್ಸ್ ಆಡಿದೆ. ತಂಡದ ಗೆಲುವಿಗೆ ಕೊಡುಗೆ ನೀಡಲು ಸಾಧ‍್ಯವಾಗಿದ್ದಕ್ಕೆ ಸಂತಸವಿದೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ