ಕೆವಿನ್ ಪೀಟರ್ಸನ್ ಸಮಸ್ಯೆಯನ್ನು ಈಮೇಲ್ ನಲ್ಲೇ ಬಗೆಹರಿಸಿದ್ದ ರಾಹುಲ್ ದ್ರಾವಿಡ್

ಸೋಮವಾರ, 3 ಆಗಸ್ಟ್ 2020 (11:58 IST)
ಮುಂಬೈ: ಟೀಂ ಇಂಡಿಯಾದ ವಾಲ್ ಎಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಹಿಂದೊಮ್ಮೆ ಇಂಗ್ಲೆಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ಸಮಸ್ಯೆಗೆ ಈಮೇಲ್ ಮೂಲಕವೇ ಪರಿಹಾರ ಸೂಚಿಸಿದ್ದರಂತೆ.


ಇಂಗ್ಲೆಂಡ್ ಕ್ರಿಕೆಟಿಗರು ಆಗೆಲ್ಲಾ ಸ್ಪಿನ್ ಬೌಲಿಂಗ್ ಎದುರು ಆಡಲು ಪರದಾಡುತ್ತಿದ್ದರು. ಆ ಪೈಕಿ ಕೆವಿನ್ ಪೀಟರ್ಸನ್ ಕೂಡಾ ಒಬ್ಬರಾಗಿದ್ದರು. ಆಗ ಅವರು ತಮ್ಮ ಸಮಸ್ಯೆಯನ್ನು ದ್ರಾವಿಡ್ ಬಳಿ ಹೇಳಿಕೊಂಡಿದ್ದರಂತೆ.

ಇದಕ್ಕೆ ದ್ರಾವಿಡ್ ಈಮೇಲ್ ಮೂಲಕವೇ ಉತ್ತರಿಸಿದ್ದರಂತೆ. ಸ್ಪಿನ್ ಬೌಲರ್ ಗಳನ್ನು ಎದುರಿಸುವ ಕಲೆ ಹೇಗೆ ಎಂದು ಸುಂದರವಾಗಿ ವಿವರಿಸಿ ಪೀಟರ್ಸನ್ ಗೆ ಈಮೇಲ್ ಮಾಡಿದ್ದರಂತೆ ದ್ರಾವಿಡ್. ಆ ಈಮೇಲ್ ನನಗೆ ಹೊಸ ಲೋಕವನ್ನೇ ತೆರೆಯಿತು ಎಂದು ಪೀಟರ್ಸನ್ ಇದೀಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ