ಐಪಿಎಲ್ ನಲ್ಲಿ ಚೀನಾ ಕಂಪನಿಗಳ ಪ್ರಾಯೋಜಕತ್ವ: ಐಪಿಎಲ್ ಬಹಿಷ್ಕರಿಸಲು ಅಭಿಮಾನಿಗಳ ಕರೆ

ಸೋಮವಾರ, 3 ಆಗಸ್ಟ್ 2020 (10:00 IST)
ಮುಂಬೈ: ಮೊನ್ನೆಯಷ್ಟೇ ಗಡಿಯಲ್ಲಿ ನಮ್ಮ ವೀರ ಜವಾನರ ಕೊಂದ ಚೀನಾ ಮೇಲೆ ಜನರು ಸಹಜವಾಗಿಯೇ ಆಕ್ರೋಶ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಐಪಿಎಲ್ ನಲ್ಲಿ ಚೀನಾ ಮೂಲದ ಕಂಪನಿಗಳ ರಾಯಭಾರತ್ವ ಮುಂದುವರಿಸಲು ನಿರ್ಧರಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.


ಚೀನಾ ಕಂಪನಿಗಳನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟಿದ್ದ ಟ್ವಿಟರಿಗರು ಈಗ ಅದೇ ಕಂಪನಿಗಳು ರಾಯಭಾರಿಗಳಾಗಿರುವ ಐಪಿಎಲ್ ನ್ನೂ ಬಹಿಷ್ಕರಿಸಿ ಎಂದು ಅಭಿಯಾನ ಆರಂಭಿಸಿದ್ದಾರೆ.

ಯುಎಇನಲ್ಲಿ ನಡೆಯಲಿರುವ ಐಪಿಎಲ್ ಕೂಟದಲ್ಲಿ ಎಲ್ಲಾ ಪ್ರಾಯೋಜಕರನ್ನು ಯಥಾ ಪ್ರಕಾರ ಮುಂದುವರಿಸಲು ನಿನ್ನೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ