ಗೆಳತಿ ಸನಯಾಗೆ ಕ್ರಿಕೆಟಿಗ ಕರಣ್ ನಾಯರ್ ಲವ್ ಪ್ರಪೋಸ್

ಸೋಮವಾರ, 1 ಜುಲೈ 2019 (10:07 IST)
ಬೆಂಗಳೂರು: ಕರ್ನಾಟಕ ಮೂಲದ ಕ್ರಿಕೆಟಿಗ ಕರಣ್ ನಾಯರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೆಳತಿ ಸನಯಾ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.


27 ವರ್ಷದ ಕರಣ್ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ಭಾರತದ ಪರ ತ್ರಿಶತಕ ಬಾರಿಸಿದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ರಣಜಿ ತಂಡದ ಪ್ರಮುಖ ಆಟಗಾರರಾಗಿರುವ ಕರಣ್ ಸಮುದ್ರ ಕಿನಾರೆಯ ಸುಂದರ ತಾಣದಲ್ಲಿ ಗೆಳತಿಗೆ ಲವ್ ಪ್ರಪೋಸ್ ಮಾಡಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಕರಣ್ ಗೆಳತಿ ಸನಯಾ ಜತೆ ಸುಂದರ ತಾಣವೊಂದರಲ್ಲಿ ಕೈಯಲ್ಲಿ ಉಂಗುರ ಹಿಡಿದು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ಆಕೆ ಕೂಡಾ ಒಪ್ಪಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ