ದುಬಾರಿಯಾದರೂ ದಾಖಲೆ ಮಾಡಿದ ಮೊಹಮ್ಮದ್ ಶಮಿ

ಸೋಮವಾರ, 1 ಜುಲೈ 2019 (09:47 IST)
ಲಂಡನ್: ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ದಾಖಲೆಯೊಂದನ್ನು ಮಾಡಿದ್ದಾರೆ.

 
ಕೊನೆಯ ಹಂತದಲ್ಲಿ ನಿಯಂತ್ರಣ ತಪ್ಪಿದರೂ ಶಮಿ ಒಟ್ಟು 5 ವಿಕೆಟ್ ಕಬಳಿಸಿದರು. ಇದರೊಂದಿಗೆ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ 5 ವಿಕೆಟ್ ಕಬಳಿಸಿದ ಆರನೇ ಬೌಲರ್ ಎನಿಸಿದರು.

 
ಇದಕ್ಕೂ ಮೊದಲು 1983 ರಲ್ಲಿ ಕಪಿಲ್ ದೇವ್, 1999 ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್, 2003 ರಲ್ಲಿ ಆಶಿಷ್ ನೆಹ್ರಾ ಮತ್ತು 2011 ರಲ್ಲಿ ಯುವರಾಜ್ ಸಿಂಗ್ 5 ವಿಕೆಟ್ ಕಬಳಿಸಿದರು. ಇದೀಗ ಶಮಿ 5 ವಿಕೆಟ್ ಪಡೆದ ಆರನೇ ಬೌಲರ್ ಎನಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ