ದುಡ್ಡಿಲ್ಲದೇ ಒದ್ದಾಡುವ ಯುವ ಕ್ರಿಕೆಟಿಗರ ನೆರವಿಗೆ ಧಾವಿಸಿದ ರಾಹುಲ್ ದ್ರಾವಿಡ್

ಶುಕ್ರವಾರ, 1 ಫೆಬ್ರವರಿ 2019 (09:09 IST)
ಮುಂಬೈ: ಕ್ರಿಕೆಟಿಗ ಎಂದರೆ ಹಣಕಾಸಿಗೆ ಏನೂ ಕೊರತೆಯಿಲ್ಲ ಎನ್ನುವುದು ಎಲ್ಲಾ ಕ್ರಿಕೆಟಿಗರ ವಿಚಾರದಲ್ಲಿ ಸತ್ಯವಲ್ಲ. ಅವಕಾಶಗಳಿಲ್ಲದೇ ಹೋದಾಗ, ಫಾರ್ಮ್ ಕಳೆದುಕೊಂಡು ಮೂಲೆಗುಂಪಾದಾಗ ಕ್ರಿಕೆಟಿಗರೂ  ಹಣಕ್ಕಾಗಿ ಪರದಾಡಬೇಕಾಗುತ್ತದೆ.


ಈ ರೀತಿ ಹಣಕಾಸಿನ ಮುಗ್ಗಟ್ಟು ಎದುರಿಸುವ ಯುವ ಕ್ರಿಕೆಟಿಗರ ನೆರವಿಗೆ ಇದೀಗ ರಾಹುಲ್ ದ್ರಾವಿಡ್ ಧಾವಿಸಿದ್ದಾರೆ. ಇಂತಹ ಕ್ರಿಕೆಟಿಗರಿಗೆ ಕ್ರಿಕೆಟ್ ಹೊರತಾಗಿ ಬೇರೊಂದು ಕ್ಷೇತ್ರದಲ್ಲಿ ಉದ್ಯೋಗ ಮಾಡಲು ನೆರವಾಗುವಂತೆ ಬಿಸಿಸಿಐ ಅಧಿಕಾರಿಗಳಿಗೆ ದ್ರಾವಿಡ್ ಸಲಹೆ ನೀಡಿದ್ದಾರೆ.

ದ್ರಾವಿಡ್ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಮತ್ತು ಎನ್ ಸಿಎ ಅಧಿಕಾರಿಗಳು ಕ್ರಿಕೆಟಿಗರಿಗೆ ಕ್ರಿಕೆಟ್ ಯೇತರ ಕ್ಷೇತ್ರಗಳಲ್ಲೂ ಉದ್ಯೋಗ ಮಾಡಲು ನೆರವಾಗುವಂತಹ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ. ಕ್ರಿಕೆಟ್ ನಿಂದ ನಿವೃತ್ತಿಯಾದ ಮೇಲೆ ಎ ತಂಡದ ಕೋಚ್ ಆಗಿ ಟೀಂ ಇಂಡಿಯಾಕ್ಕೆ ಅತ್ಯುತ್ತಮ ಕ್ರಿಕೆಟಿಗರನ್ನು ತಯಾರು ಮಾಡುತ್ತಿರುವ ದ್ರಾವಿಡ್ ಹಲವಾರು ಬಾರಿ ಯುವ  ಆಟಗಾರರಿಗೆ ನೆರವಾಗಿ ಜಂಟಲ್ ಮೆನ್ ಎನಿಸಿಕೊಂಡಿದ್ದಾರೆ. ಈಗ ದ್ರಾವಿಡ್ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ