ಮತ್ತೆ ಎಡವಟ್ಟು ಮಾಡಿಕೊಂಡ ರವಿಚಂದ್ರನ್ ಅಶ್ವಿನ್

ಶುಕ್ರವಾರ, 29 ಮಾರ್ಚ್ 2019 (08:22 IST)
ಕೋಲ್ಕೊತ್ತಾ: ಯಾಕೋ ಈ ಬಾರಿಯ ಐಪಿಎಲ್ ನಲ್ಲಿ ಉದ್ದೇಶಪೂರ್ವಕವಾಗಿಯೋ, ಅಲ್ಲದೆಯೋ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಒಂದಲ್ಲಾ ಒಂದು ವಿವಾದಕ್ಕೀಡಾಗುತ್ತಿದ್ದಾರೆ.


ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಆಟಗಾರ ಜೋಸ್ ಬಟ್ಲರ್ ರನ್ನು ಮಂಕಡ್ ಔಟ್ ಮಾಡಿ ವಿವಾದಕ್ಕೀಡಾಗಿದ್ದ ಅಶ್ವಿನ್ ಕೋಲ್ಕೊತ್ತಾ ನೈಟ್ ರೈಡರ್ಸ್‍ ತಂಡದ ವಿರುದ್ಧದ ಆಟದಲ್ಲೂ ಎಡವಟ್ಟು ಮಾಡಿಕೊಂಡು ದುಬಾರಿ ಬೆಲೆ ತೆತ್ತಿದ್ದಾರೆ.

ಕೆಕೆಆರ್ ಇನಿಂಗ್ಸ್ ನ 17 ನೇ ಓವರ್ ನಲ್ಲಿ ಆಂಡ್ರ್ಯೂ ರಸೆಲ್ 3 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೆಕೆಆರ್ ಅಭಿಮಾನಿಗಳು ರಸೆಲ್ ಬೌಲ್ಡ್ ಆಗುತ್ತಿದ್ದಂತೇ ಮೌನಕ್ಕೆ ಶರಣಾಗಿತ್ತು.

ಆದರೆ ಅಂಪಾಯರ್ ಆ ಬಾಲ್ ನ್ನು ನೋ ಬಾಲ್ ಎಂದು ಘೋಷಿಸಿದರು. ಯಾಕೆಂದರೆ ನಿಯಮದ ಪ್ರಕಾರ 30 ಯಾರ್ಡ್ ಸರ್ಕಲ್ ಒಳಗೆ ಆಗ ನಾಲ್ವರು ಫೀಲ್ಡರ್ ಗಳಿರಬೇಕಿತ್ತು. ಆದರೆ ಪಂಜಾಬ್ ನಾಯಕನ ಅವಾಂತರದಿಂದ ಮೂವರು ಫೀಲ್ಡರ್ ಗಳು ಮಾತ್ರ ಅಲ್ಲಿದ್ದರು. ಹೀಗಾಗಿ ಅಂಪಾಯರ್ ಅದನ್ನು ನೋ ಬಾಲ್ ಎಂದು ಘೋಷಿಸಿದರು.

ನಂತರ ನಡೆದಿದ್ದೇ ಬೇರೆ ಕತೆ. ರಸೆಲ್ ಇದರ ಲಾಭವೆತ್ತಿ ಮುಂದಿನ 11 ಬಾಲ್ ಗಳಲ್ಲಿ ಐದು ಸಿಕ್ಸರ್, ಮೂವರು ಬೌಂಡರಿ ಚಚ್ಚಿ ತಂಡದ ಸ್ಕೋರ್ 200 ಗಡಿ ದಾಟಿಸಿದರು. ಪಂದ್ಯದ ಬಳಿಕ ಅಶ್ವಿನ್ ಈ ತಪ್ಪಿನ ಜವಾಬ್ಧಾರಿ ತಾವೇ ಹೊತ್ತುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ