ಭಾರತದಲ್ಲಿ ಹಿಟ್ ಮ್ಯಾನ್, ವಿದೇಶದಲ್ಲಿ ಶಿಟ್ ಮ್ಯಾನ್: ರೋಹಿತ್ ಶರ್ಮಾಗೆ ಲೇವಡಿ

ಸೋಮವಾರ, 4 ಫೆಬ್ರವರಿ 2019 (09:07 IST)
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡ ನಂತರ ಹಂಗಾಮಿ ನಾಯಕ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಾರೆ.


ರೋಹಿತ್ ಶರ್ಮಾ ಅಂತಿಮ ಎರಡು ಏಕದಿನ ಪಂದ್ಯಕ್ಕೆ ನಾಯಕರಾಗಿದ್ದರು. ಅದಕ್ಕಿಂತ ಮೊದಲೂ ಏಕದಿನ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಬರಲಿಲ್ಲ. ಈ ಕಾರಣಕ್ಕೆ ಅಭಿಮಾನಿಗಳು ರೋಹಿತ್ ಮೇಲೆ ಕಿಡಿ ಕಾರಿದ್ದಾರೆ.

ತಂಡದ ಹೀನಾಯ ಪರಿಸ್ಥಿತಿಯಲ್ಲಿದ್ದಾಗಲೂ ನಿಂತು ಆಡದ ರೋಹಿತ್ ಭಾರತ ಮತ್ತು ಏಷ್ಯಾ ಖಂಡದ ಪಿಚ್ ನಲ್ಲಿ ಮಾತ್ರ ಹಿಟ್ ಮ್ಯಾನ್. ವಿದೇಶೀ ಪಿಚ್ ಗೆ ಹೋದರೆ ಶಿಟ್ ಮ್ಯಾನ್ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಕೊಹ್ಲಿ ನಾಯಕರಾಗಿದ್ದಾಗ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕಿತ್ತು ಎಂದು ರೋಹಿತ್ ಕಿರಿಕ್ ಮಾಡುತ್ತಿದ್ದರು. ಈಗ ಅವರು ನಾಯಕರಾಗಿದ್ದಾಗ ಯಾಕೆ ಧೋನಿಗೆ ನಾಲ್ಕನೇ ಕ್ರಮಾಂಕ ಕೊಡಲಿಲ್ಲ. ಕೊಹ್ಲಿ ಬಗ್ಗೆ ಹೊಟ್ಟೆ ಕಿಚ್ಚು ಪಡಲು ಮಾತ್ರ ರೋಹಿತ್ ಲಾಯಕ್ಕು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ