ಕೊಹ್ಲಿ ಔಟಾಗಿದ್ದಕ್ಕೆ ಲಸಿತ್ ಮಲಿಂಗಾ ಜತೆ ರೋಹಿತ್ ಶರ್ಮಾ ಸಂಭ್ರಮಿಸಿದ್ದು ಏಕೆ ಗೊತ್ತಾ?!

ಶುಕ್ರವಾರ, 1 ಸೆಪ್ಟಂಬರ್ 2017 (10:25 IST)
ಕೊಲೊಂಬೊ: ನಮ್ಮದೇ ತಂಡದ ಅದರಲ್ಲೂ ಶತಕ ಗಳಿಸಿದ್ದ ನಾಯಕ ಔಟಾಗುವಾಗ ಬೇಸರಿಸುವುದು ಬಿಟ್ಟು, ವಿಕೆಟ್ ಕಿತ್ತ ಬೌಲರ್ ನೊಂದಿಗೆ ಸಂಭ್ರಮಿಸಿದರೆ ಯಾರಿಗಾದರೂ ಡೌಟು ಬರದೇ ಇದ್ದೀತೇ?

 
ನಿನ್ನೆ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲೂ ಇದೇ ಘಟಟನೆ ನಡೆದಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ ನ್ನು ಲಂಕಾ ನಾಯಕ ಲಸಿತ್ ಮಲಿಂಗಾ ಕಬಳಿಸಿದಾಗ ಇನ್ನೊಂದು ತುದಿಯಲ್ಲಿ ಬ್ಯಾಟ್ ಮಾಡುತ್ತಿದ್ದ ರೋಹಿತ್ ಶರ್ಮಾ ಮಲಿಂಗಾಗೆ ಅಭಿನಂದಿಸಿದ್ದರು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಇವರಿಬ್ಬರೂ ಜತೆಯಾಗಿ ಆಡುತ್ತಾರೆ. ಹಾಗಿದ್ದರೂ ದೇಶದ ಪರ ಆಡುವಾಗ ರೋಹಿತ್ ಹೀಗೆ ತಮ್ಮದೇ ತಂಡದ ಆಟಗಾರನ ವಿಕೆಟ್ ಕಿತ್ತಿದ್ದಕ್ಕೆ ಎದುರಾಳಿ ಜತೆ ಸಂಭ್ರಮಿಸುವುದು ಸರೀನಾ?

ಆದರೆ ಅಸಲಿ ವಿಚಾರವೇ ಬೇರೆ. ರೋಹಿತ್ ಅಭಿನಂದಿಸಲೂ ಕಾರಣವಿತ್ತು. ಲಸಿತ್ ಕಬಳಿಸಿದ ಈ ವಿಕೆಟ್ ಅವರ ವೃತ್ತಿ ಜೀವನದ 300 ನೇ ವಿಕೆಟ್ ಆಗಿತ್ತು. ಇದೇ ಕಾರಣಕ್ಕೆ ರೋಹಿತ್ ತಮ್ಮ ಐಪಿಎಲ್ ಜತೆಗಾರನಿಗೆ ಅಭಿನಂದಿಸಿದ್ದು.

ಇದನ್ನೂ ಓದಿ.. ಬಿಎಸ್ ಯಡಿಯೂರಪ್ಪ ಪುತ್ರನ ಕಾರು ಡಿಕ್ಕಿ ಹೊಡೆದು ಯುವಕ ಸಾವು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ