23 ಸಾವಿರ ಕೋಟಿ ತುರ್ತು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

ಶುಕ್ರವಾರ, 9 ಜುಲೈ 2021 (09:55 IST)
ದೆಹಲಿ: ಹೊಸದಾಗಿ ಮೋದಿಯವರ 2.0 ಸಂಪುಟ ಸೇರಿರುವ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಗುರುವಾರದಂದು ಸುಮಾರು 23 ಸಾವಿರ ಕೋಟಿ ಮೊತ್ತದ ತುರ್ತು ಪ್ಯಾಕೇಜ್ ಘೋಷಣೆ ಮಾಡಿದರು. ನಮ್ಮ ಸರ್ಕಾರವು ಒಗ್ಗೂಡಿ ಸಮಸ್ಯೆಯ ವಿರುದ್ದ ಹೋರಾಡುವುದರಲ್ಲಿ ನಂಬಿಕೆ ಇಟ್ಟಿದ್ದು ರಾಜ್ಯಗಳ  ಜೊತೆ ಒಗ್ಗೂಡಿ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂದರು.  9 ತಿಂಗಳ ಸಮಯದಲ್ಲಿ ನಾವು ಆದಷ್ಟು ತುರ್ತಾಗಿ ಕೆಲಸ ಮಾಡುತ್ತೇವೆ.  ನಮ್ಮ ಮುಂದಿರುವ ಸವಾಲು ಎಂದರೆ ಅಗತ್ಯವಿರುವ ರಾಜ್ಯಗಳಿಗೆ ಕೈಲಾದಷ್ಟು ಸಹಾಯ ಮಾಡುವುದು ಹಾಗೂ ಕಷ್ಟ ಕಾಲದಲ್ಲಿ ಅವರ ಜೊತೆ ನಿಲ್ಲುವುದಾಗಿದೆ ಎಂದು ನುಡಿದರು.

















ಕೋವಿಡ್ ಎರಡನೇ ಅಲೆಗೆ ದೇಶದವು ತತ್ತರಿಸಿ ಹೋಗಿದ್ದು ಸಾಕಷ್ಟು ಹಾನಿಯಾಗಿದೆ ಆದ ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಹಣವನ್ನು ಜಂಟಿಯಾಗಿ ವಿನಿಯೋಗಿಸಲಿವೆ ಎಂದು ಮಾಂಡವೀಯ ಅವರು ಹೇಳಿದರು.
ಮೂರನೇ ಅಲೆಯನ್ನು ನಿಭಾಯಿಸಲು ನಿಮ್ಮ ಸರ್ಕಾರ ಸಿದ್ದವಾಗಿದೆಯೇ ಎನ್ನುವ ಪ್ರಶ್ನೆಗೆ,  736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರ ಹಾಗೂ 20 ಸಾವಿರ ತುರ್ತು ನಿಗಾ ಘಟಕಗಳನ್ನು ಹೊಂದಿರುವ ಹಾಸಿಗೆಗಳನ್ನು ಕೋವಿಡ್ ರಿಲೀಫ್ ಫಂಡ್ ಅಡಿಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಗುರುವಾರ ನಡೆದ ಕ್ಯಾಬಿನೆಟ್ ಮೀಟಿಂಗ್ ನಂತರದ  ಈ ಘೋಷಣೆ ಮಾಡಲಾಗಿದೆ. ಗುಜರಾತ್ನ ಸೌರಾಷ್ಟ್ರ ಪ್ರದೇಶದ ಬಿಜೆಪಿ ಮುಖಂಡರಾದ ಮಂಡವಿಯಾ ಅವರನ್ನು ಬಿಜೆಪಿಯ ಹಿರಿಯ ಮುಖಂಡ  ಡಾ.ಹರ್ಷ್ ವರ್ಧನ್ ಬದಲಿಗೆ ಆರೋಗ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಈ ಹಿಂದೆ  ಮಂಡಾವಿಯಾ ಅವರು ರಾಜ್ಯ ಸಚಿವ (ಸ್ವತಂತ್ರ ಖಾತೆ )ರಾಗಿ  ಕೆಲಸ ಮಾಡುತ್ತಿದ್ದರು. ಈಗ  ಕ್ಯಾಬಿನೆಟ್ ಹುದ್ದೆಗೆ ಏರಿಸಲಾಗಿದೆ.  ಮೊದಲು ಬಂದರು ಸಚಿವಾಲಯದ ಸ್ವತಂತ್ರ ಉಸ್ತುವಾರಿಯನ್ನು ಹೊಂದಿದ್ದರು ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವ ಜವಾಬ್ದಾರಿಯನ್ನೂ ಹೊತ್ತಿದ್ದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದ್ದು ಈ ಹೊತ್ತಿನಲ್ಲಿ ಮಾಂಡವಿಯಾ ಅವರ ಕಾರ್ಯ ವೈಖರಿ ಬೇರೆಯೇ ರೀತಿ ಇರಬೇಕಾಗಿದೆ ಎಂದು ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮಾಂಡವಿಯಾ ಅವರಿಗೆ ಸಲಹೆ ನೀಡಿದ್ದು, ವ್ಯಾಕ್ಸಿನ್ ಸರಬರಾಜನ್ನು ಆದಷ್ಟು ಬೇಗ ಮಾಡಿ, ಮೊದಲು ಈ ವಿಷಯದ ಮುರಿತು ಗಮನ ಹರಿಸಿ ಎಂದು ಹೇಳಿದ್ದಾರೆ. ಅಲ್ಲದೇ ತಮಿಳುನಾಡಿನ ಸಾಕಷ್ಟು ಆರೋಗ್ಯ ಕೇಂದ್ರಗಳಲ್ಲಿ ವ್ಯಾಕ್ಸಿನ್ ಕೊರತೆ ಇದ್ದು ಜನರು ವ್ಯಾಕ್ಸಿನ್ ದೊರಕದೆ ಒದ್ದಾಡುತ್ತಿದ್ದಾರೆ. ನಾನು ಮತ್ತೆ ಇದೇ ವಿಚಾರವಾಗಿ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನೂತನ ಆರೋಗ್ಯ ಮಂತ್ರಿ ಮಾಂಡವೀಯ ಅವರ ಮುಂದಿರುವ ಅತಿ ದೊಡ್ಡ ಸವಾಲು ಎಂದರೆ ಅವ್ಯಾಹತವಾಗಿ ಎಲ್ಲಾ ರಾಜ್ಯಗಳಿಗೆ ತುರ್ತಾಗಿ ವ್ಯಾಕ್ಸಿನ್ ಪೂರೈಕೆ ಮಾಡುವುದಾಗಿದೆ ಎಂದು ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ