ಮಾನವ ಸಂತತಿಯ ಉಳಿವಿಗೆ ಲೈಂಗಿಕ ಕ್ರಿಯೆ ಅನಿವಾರ್ಯವಾಗಿ ಬೇಕೆ ಬೇಕು. ಆದರೆ ಹಾಗಂತ ಸದಾ ಲೈಂಗಿಕ ಕ್ರಿಯೆ ಮಾಡ್ತಾನೇ ಇದ್ರೆ ಇರೋ ಬರೋ ರೋಗಗಳೆಲ್ಲ ಮೈಯಲ್ಲಿ ಸೇರಿಕೊಳ್ಳುವುದು ಗ್ಯಾರಂಟಿ.
ಮಡಿವಂತಿಕೆಯನ್ನು ಬದಿಗೆ ಇಟ್ಟು ಇಂದು ಪತಿ-ಪತ್ನಿಯರು ಲೈಂಗಿಕ ಕ್ರಿಯೆ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಬೇಕಿದೆ.
ದಂಪತಿಯ ದೇಹ ಆರೋಗ್ಯಕ್ಕೆ ಲೈಂಗಿಕ ಕ್ರಿಯೆ ಎಷ್ಟು ಮುಖ್ಯವೋ ಅತೀ ಯಾದರೆ ಅಷ್ಟೇ ನಷ್ಟವನ್ನೂ ಉಂಟು ಮಾಡಬಲ್ಲದು.
ಆಯಾಸ, ಮನಸ್ಸಿನ ಖಿನ್ನತೆ, ಮನಸ್ತಾಪ ದೂರವಾಗಲು ಹಾಗೂ ಸುಖಕರ ದಾಂಪತ್ಯಕ್ಕೆ ಲೈಂಗಿಕ ಕ್ರಿಯೆ ಅಗತ್ಯವಾಗಿ ಬೇಕು.
ವಾರಕ್ಕೆ ಒಂದು ಬಾರಿ ಸಂಭೋಗ ಮಾಡುವುದರಿಂದ ದೇಹಕ್ಕೆ ಒಳ್ಳೆಯದಂತೆ. ಹೀಗಂತ ಸಂಶೋಧನೆಗಳು ಹೇಳುತ್ತಿವೆ.
ಒಂದು ವರ್ಷದಲ್ಲಿ ದಂಪತಿಗಳು ಪರಸ್ಪರ 55 ಬಾರಿ ಲೈಂಗಿಕ ಕ್ರಿಯೆಯಲ್ಲಿ ತೇಲಾಡಬೇಕಂತೆ. ಇದರಿಂದ ಪತಿ- ಪತ್ನಿ ಇಬ್ಬರಿಗೂ ಅನುಕೂಲವೇ ಹೆಚ್ಚು ಅಂತಾನೂ ಸಂಶೋಧಕರು ಹೇಳಿದ್ದಾರೆ.
ಸಂಭೋಗ ಮಾಡದ ದಿನ ರೋಮ್ಯಾನ್ಸ್, ಪ್ರೀತಿ, ಆತ್ಮೀಯತೆಯ ತೆಕ್ಕೆಯಲ್ಲಿ ಕಾಲ ಕಳೆದುಕೊಂಡರೂ ಅದು ಉತ್ತಮ ಫಲಿತಾಂಶ ನೀಡುತ್ತದೆ.