ಬಾಯಿ ಚಪ್ಪರಿಸುವ ಹೆಸರುಕಾಳಿನ ಪರೋಟಾ

ಬುಧವಾರ, 13 ಫೆಬ್ರವರಿ 2019 (13:43 IST)
ಬೇಕಾಗುವ ಸಾಮಗ್ರಿಗಳು: 
* ಮೊಳಕೆ ಬರಿಸಿದ ಹೆಸರುಕಾಳು - 1 ಕಪ್
* ಶುಂಠಿ 
* ಬೆಳ್ಳುಳ್ಳಿ 10 ಎಸಳು
* ಖಾರದ ಪುಡಿ - 1 ಚಮಚ
* ಗರಂ ಮಸಾಲೆ - 1 ಚಮಚ
* ಈರುಳ್ಳಿ 1
* ಅರಿಶಿನ
* ಉಪ್ಪು ರುಚಿಗೆ ತಕ್ಕಷ್ಟು
 
 ತಯಾರಿಸುವ ವಿಧಾನ:
 
ಮೊದಲು ಗೋಧಿ ಹಿಟ್ಟು, ನಾಲ್ಕು ಚಮಚ ತುಪ್ಪ, ಉಪ್ಪು, ಸಕ್ಕರೆ ಹಾಕಿ ನೀರನ್ನು ಹಾಕಿ ಚಪಾತಿ ಹಿಟ್ಟನ್ನು ಕಲೆಸ್ ಅರ್ಧ ಗಂಟೆ ಮುಚ್ಚಿ ಇಡಬೇಕು. ನಂತರ ಮಸಾಲೆಯನ್ನು ತಯಾರಿಸಲು ಮೊದಲು ಬೆಳ್ಳುಳ್ಲಿ, ಶುಂಠಿಯನ್ನು ಜಜ್ಜಿ ಪುಡಿ ಮಾಡಿಕೊಳ್ಳಬೇಕು. ನಂತರ ಈರುಳ್ಳಿಯನ್ನು ಸಣ್ಣಗೆ ಕಟ್ ಮಾಡಿ ಕುಕ್ಕರ್‌ನಲ್ಲಿ ಖಾರದಪುಡ್, ಗರಂ ಮಸಾಲೆ, ಹೆಸರುಕಾಳು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಕಟ್ ಮಾಡಿಕೊಂಡ ಈರುಳ್ಳಿ, ಅರಿಶಿಣ, ಉಪ್ಪು ಎಲ್ಲವನ್ನೂ ಹಾಕಿ ನಾಲ್ಕು ವಿಷಲ್ ಹೊಡೆ,ಬೇಕು. ಅದನ್ನು ತಣ್ಣಗಾಗಲು ಬಿಡಬೇಕು.

ನಂತರ ಈ ಮಸಾಲೆಯು ತಣಿದ ನಂತರ ಚಪಾತಿ ಉಂಡೆಯನ್ನು ಮಾಡಿ ಸ್ವಲ್ಪ ಲಟ್ಟಿಸಿ ಮಸಾಲೆಯನ್ನು ಅದರ ಮಧ್ಯೆ ಹಾಕಿ ಮುಚ್ಚಿ ಪುನಃ ಲಟ್ಟಿಸಿ ಕಾವಲಿಗೆ ಹಾಕಿ ತುಪ್ಪವನ್ನು ಹಾಕಿ ಎರಡೂ ಬದಿಯಲ್ಲಿ ಚೆನ್ನಾಗಿ ಕಾಯಿಸಬೇಕು. ಈಗ ಬಿಸಿ ಬಿಸಿ ಪರೋಟಾ ಸವಿಯಲು ಸಿದ್ಧ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ